ಭಾರತದಲ್ಲಿ ಶೇ.50ರಷ್ಟು ಗರ್ಭಧಾರಣೆ ಅನಿರೀಕ್ಷಿತ, 2015ರಲ್ಲಿ 15.6 ದಶಲಕ್ಷ ಗರ್ಭಪಾತ

ಭಾರತದಲ್ಲಿನ ಶೇ.50ರಷ್ಟು ಗರ್ಭಧಾರಣೆಗಳು ಅನೀರಿಕ್ಷಿತವಾಗಿ ಆಗುತ್ತವೆ ಎಂದು ಖ್ಯಾತ ಆರೋಗ್ಯ ನಿಯತಕಾಲಿಕೆಯೊಂದು ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಭಾರತದಲ್ಲಿನ ಶೇ.50ರಷ್ಟು ಗರ್ಭಧಾರಣೆಗಳು ಅನೀರಿಕ್ಷಿತವಾಗಿ ಆಗುತ್ತವೆ ಎಂದು ಖ್ಯಾತ ಆರೋಗ್ಯ ನಿಯತಕಾಲಿಕೆಯೊಂದು ವರದಿ ಮಾಡಿದೆ.
ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್  ಎಂಬ ನಿಯತಕಾಲಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ತನ್ನ ವರದಿಯಲ್ಲಿ ಭಾರತದಲ್ಲಿ ಶೇ.50 ರಷ್ಟು ಗರ್ಭಧಾರಣೆಗಳು  ಅನೀರಿಕ್ಷಿತವಾಗಿ ಆಗುತ್ತವೆ. ಅಂತೆಯೇ 2015ರ ಒಂದೇ ವರ್ಷದಲ್ಲೇ  ಬರೊಬ್ಬರಿ 15.6 ದಶಲಕ್ಷದಷ್ಟು ಗರ್ಭಪಾತ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ ಎಂದು ಹೇಳಿದೆ. ಇನ್ನು ಭಾರತದಲ್ಲಿ ಗರ್ಭಾಪಾತ ಸರಾಸರಿ ಬಗ್ಗೆಯೂ ನಿಯತಕಾಲಿಕೆ ಮಾಹಿತಿ ನೀಡಿದ್ದು, ಪ್ರತೀ ಸಾವಿರ ಗರ್ಭಿಣಿಯರ ಪೈಕಿ 47  ಮಂದಿಗೆ ಗರ್ಭಪಾತವಾಗುತ್ತದೆ ಎಂದು ಆಂದಾಜಿಸಿದೆ.
ಈ ಅಂಕಿ ಸಂಖ್ಯೆ ದಕ್ಷಿಣ ಏಷ್ಯಾದ ದೇಶಗಳ ಗರ್ಭಪಾತ ಅಂಕಿ ಸಂಖ್ಯೆಗೆ ಸಮಾನವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಇದೇ ವೇಳೆ ಭಾರತದಲ್ಲಿ ಗರ್ಭಿಣಿ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ನಿಯತಕಾಲಿಕೆ ಬೆಳಕು ಚೆಲ್ಲಿದ್ದು, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದ ಆರೈಕೆ ಮತ್ತು ಸೇವೆಗಳು ಸೀಮಿತವಾಗಿದ್ದು, ಇದೇ ಕಾರಣಕ್ಕೆ ಗರ್ಭಪಾತ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ನ್ಯೂಯಾರ್ಕ್ ಮೂಲದ ಸಂಶೋಧನಾ ಸಂಸ್ಥೆ ಗುಟ್ಮಾಚರ್ ಇನ್ಸ್ ಟಿಟ್ಯೂಟ್ ನ ಉಪಾಧ್ಯಕ್ಷ ಡಾ.ಸುಶೀಲಾ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ವರದಿಯಲ್ಲಿ ಡಾ.ಸುಶೀಲಾ ಸಿಂಗ್ ಅವರು ಅಭಿಪ್ರಾಯಪಟ್ಟಿರುವಂತೆ ಭಾರತದಲ್ಲಿ ಗರ್ಭಿಣಿ ಮಹಿಳೆಯರ ಆರೈಕೆ ಮಾಡಲು ನುರಿತ ನರ್ಸ್ ಗಳು ಮತ್ತು ವೈದ್ಯರ ಕೊರೆತೆ ಇದ್ದು, ಕೇವಲ ಅದು ಮಾತ್ರವಲ್ಲದೇ ಸೂಕ್ತ ವೈದ್ಯಕೀಯ ಪರಿಕರಗಳ ಕೊರತೆ ಕೂಡ ಗರ್ಭಿಣಿ ಸ್ತ್ರೀಯರನ್ನು ಬಾದಿಸುತ್ತಿದೆ.ಅಂತೆಯೇ ಭಾರತದಲ್ಲಾಗುವ ಗರ್ಭಪಾತ ಪ್ರಕರಣಗಳ ಪೈಕಿ ಬಹುತೇಕ ಅಂದರೆ ಶೇ.81ರಷ್ಟು ಗರ್ಭಪಾತ ಪ್ರಕರಣಗಳು ಸೂಕ್ತ ರೀತಿಯ ಚಿಕಿತ್ಸೆ ಕೊರತೆ, ವೈದ್ಯಕೀಯ ಪರಿಕರಗಳ ಕೊರತೆ ಮತ್ತು ನುರಿತ ವೈದ್ಯರ ಕೊರತೆಯಿಂದಾಗಿ ಸಂಭವಿಸುತ್ತಿದೆ ಎಂದು ಡಾ.ಸುಶೀಲಾ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಶೇ4ರಷ್ಟು ಗರ್ಭಪಾತವನ್ನು ವೈದ್ಯಕೀಯ ಪರಿಕರಗಳ ಮೂಲಕ ಮಾಡಿದರೆ, ಶೇ.5ರಷ್ಟು ಗರ್ಭಪಾತವನ್ನು ಆಸ್ಪತ್ರೆಯಿಂದ ಹೊರಗೆ ಅಂದರೆ ಖಾಸಗಿ ಪ್ರಯೋಗಾಲಯಗಳಲ್ಲಿ ಅವೈಜ್ಞಾನಿಕವಾಗಿ ಮಾಡಲಾಗುತ್ತದೆ. ಇಂತಹ ಗರ್ಭಾಪತ ಪ್ರಕರಣಗಳಲ್ಲಿ ಗರ್ಭಿಣಿ ಸ್ತ್ರೀಯರೂ ಕೂಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಸುಶೀಲಾ ಸಿಂಗ್ ಹೇಳಿದ್ದಾರೆ.
ಈ ವರದಿಗಾಗಿ ತಜ್ಞರು ಎರಡು ಮೂಲಗಳನ್ನು ಜಾಲಾಡಿದ್ದು, ಒಂದು ರಾಷ್ಟ್ರೀಯ ಮಾರಾಟ ಮತ್ತು ವಿತರಣಾ ಮಾಹಿತಿ ಸಂಸ್ಥೆ (ಎಂಎಂಎ) ಮೂಲಕ ಪಡೆದ ದತ್ತಾಂಶಗಳ ಮೂಲಕ ಸಿದ್ಧಪಡಿಸಿದ ಮಾಹಿತಿಯಾಗಿದ್ದು, ಮತ್ತೊಂದು 6 ರಾಜ್ಯಗಳಲ್ಲಿ ನಡೆದ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳ ದೊಡ್ಡ ಪ್ರಮಾಣದ ಸಮೀಕ್ಷೆ ಮೂಲದ ಪಡೆದ ಮಾಹಿತಿಯಿಂದ ಸಿದ್ಧ ಪಡಿಸಿದ ವರದಿಯಾಗಿದೆ. ಈ ವರದಿಗಾಗಿ ಅಸ್ಸಾಂ, ಬಿಹಾರ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸರ್ವೇ ಕಾರ್ಯ ನಡೆಸಲಾಗಿದ್ದು, ಇದರಿಂದ ಲಭಿಸಿದ ಮಾಹಿತಿ ಮೇರೆಗೆ ಭಾರತದಲ್ಲಿ ನಾಲ್ಕು ಗರ್ಭಾಪಾತ ಪ್ರಕರಣಗಳ ಪೈಕಿ ಒಬ್ಬರಿಗೆ ಮಾತ್ರ ಗರ್ಭಾಪಾತದ ಸೂಕ್ತ ಆರೈಕೆ ದೊರೆಯುತ್ತಿದೆ. ಇನ್ನುಳಿದ ಮೂರು ಗರ್ಭಾಪತ ಪ್ರಕರಣಗಳು ಅವೈಜ್ಞಾನಿಕ ಮತ್ತು ಅಪಾಯಕಾರಿ ಮಾದರಿಗಳಲ್ಲಿ ನಡೆಯುತ್ತಿದೆ ಸಂಶೋಧಕರು ಪತ್ತೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com