ಪ್ರತಿ 10 ರಲ್ಲಿ ಒಂದು ಔಷಧ ಉತ್ಪನ್ನ ನಕಲಿ, ರೋಗಗಳನ್ನೂ ಗುಣಪಡಿಸಲು ಅಸಾಧ್ಯ: ವಿಶ್ವ ಆರೋಗ್ಯ ಸಂಸ್ಥೆ ವರದಿ

ಭಾರತದಂತಹಾ ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆರ್ಥಿಕತೆಯ ರಾಷ್ಟ್ರಗಳಲ್ಲಿ ಲಭ್ಯವಾಗುವ ಹತ್ತರಿಲ್ಲಿ ಒಂದು ವೈದ್ಯಕೀಯ ಉತ್ಪನ್ನಗಳು ಒಂದೋ ಕಳಪೆಯಾಗಿರುತ್ತವೆ ಅಥವಾ ತಪ್ಪಾದ......
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಭಾರತದಂತಹಾ ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆರ್ಥಿಕತೆಯ ರಾಷ್ಟ್ರಗಳಲ್ಲಿ ಲಭ್ಯವಾಗುವ ಹತ್ತರಿಲ್ಲಿ ಒಂದು ವೈದ್ಯಕೀಯ ಉತ್ಪನ್ನಗಳು ಒಂದೋ ಕಳಪೆಯಾಗಿರುತ್ತವೆ ಅಥವಾ ತಪ್ಪಾದ ಔಷಧೋತ್ಪನ್ನವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ಡಬ್ಲ್ಯುಎಚ್ ಓ ಪ್ರಕಾರ ಈ ಉತ್ಪನ್ನಗಳು ಕೇವಲ ಕಳಪೆಯಷ್ಟೇ ಅಲ್ಲದೆ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ ಅಥವಾ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ. "ಕಳಪೆ ಗುಣಮಟ್ಟದ ಔಷಧಿಗಳು ದುರ್ಬಲ ಸಮುದಾಯದವರ ಆರೋಗ್ಯದ ಮೇಲೆ ಅತ್ಯಂತ ಹೆಚ್ಚಿನ ದುಷ್ಪರಿಣಾಮವನ್ನು ಬಿರುತ್ತದೆ" ಎಂದು ಡಬ್ಲ್ಯುಎಚ್ ಓ ನಿರ್ದೇಶಕ ಟೆಡ್ರೋಸ್ ಅಧಾನಮ್ ಗೆಬ್ರೈಸಸ್ ಅಭಿಪ್ರಾಯ ಪಟ್ಟಿದ್ದಾರೆ.
2013 ರಿಂದ, ಕಳಪೆದರ್ಜೆಯ ಅಥವಾ ತಪ್ಪಾದ ಔಷಧ ಉತ್ಪನ್ನಗಳ ಕುರಿತಂತೆ 1,500 ವರದಿಗಳನ್ನು ಡಬ್ಲ್ಯುಎಚ್ ಓ ಪಡೆದುಕೊಂಡಿದೆ. ಇವುಗಳಲ್ಲಿ, ಹೆಚ್ಚಾಗಿ ರೋಗ ಪ್ರತಿಬಂಧಕಗಳು (ಆಂಟಿಬಯೋಟಿಕ್ಸ್) ಸೇರಿದೆ.ಇದಲ್ಲದೆ ಇಂತಹಾ ವರದಿಗಳಲ್ಲಿ ಶೇ. 42ರಷ್ಟು ವರದಿಗಳು ಆಫ್ರಿಕಾ ಮೂಲದಿಂದ ಬಂದರೆ ಇನ್ನು ಶೇ. 21 ರಷ್ಟು ಅಮೆರಿಕ, ಶೇ. 21 ರಷ್ಟು ಯುರೋಪ್ ಮೂಲದಿಂದ ಬಂದಿದೆ.
"ಇದು ಒಟ್ಟಾರೆ ಸಮಸ್ಯೆಯ ಒಂದು ಸಣ್ಣ ಭಾಗವಷ್ಟೇ ಆಗಿದೆ, ಇನ್ನು ಅದೆಷ್ಟೋ ಸಮಯ ನಮಗೆ ವರದಿ ಸಿಗದೆ ಇರುವ ಸಾದ್ಯತೆ ಇದೆ. ಉದಾಹರಣೆ ಹೇಳುವುದಾದರೆ ಪಶ್ಚಿಮ ಫೆಸಿಪಿಕ್ ಪ್ರದೇಶದಿಂದ ಇದುವರೆಗೆ ಕೇವಲ ಶೇ.8 ರಷ್ಟು ದೂರುಗಳು ಮಾತ್ರವೇ ಬಂದಿದೆ. ಇನ್ನು ಶೇ. 6ರಷ್ಟು ಪೂರ್ವ ಮೆಡಿಟರೇನಿಯನ್ ಪ್ರದೇಶದಿಂದಲೂ, ಶೇ. 2 ರಷ್ಟು ದಕ್ಷಿಣ ಪೂರ್ವ ಏಷ್ಯಾದಿಂದಲೂ ವರದಿಗಳು ಬಂದಿವೆ" ವರದಿ ಉಲ್ಲೇಖಿಸಿದೆ
ಇದು ನಿಜವಾಗಿಯೂ ಒಂದು ಜಾಗತಿಕ ಸಮಸ್ಯೆ. ಇಂದಿನ ಅಗ್ಗದ ದರದ ವಾಯುಯಾನ ಸೇವೆ, ಸಾರ್ವಜನಿಕ ಪ್ರಯಾಣ ವ್ಯವಸ್ಥೆಯಿಂದ ಯಾರೊಬ್ಬ ಸಹ ರೋಗಗಳ ಸೋಂಕು ಇರುವ ರಾಷ್ಟ್ರದಿಂದ ಇನ್ನೊಂದು ಸೋಂಕು ರಹಿತ ರಾಷ್ಟ್ರಕ್ಕೆ ಪ್ರಯಾಣಿಸಬಹುದು. ಆಗ ಆ ರೋಗಿಯಿಂದ ಅಲ್ಲಿನ ಸಾರ್ವಜನಿಕರಿಗೂ ರೋಗ ತಗುಲುವ ಸಾದ್ಯತೆ ಇದೆ. ಕೆಲ ಬ್ಯಾಕ್ಟೀರಿಯಾ, ವೈರಸ್ ಗಳಿಂದ ತಗಲುವ ಸೋಂಕಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹಾ ವೈದ್ಯಕೀಯ ಉತ್ಪನ್ನಗಳು ಕುಟುಂಬಗಳ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ, ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ. ಇಂತಹಾ ವೈದ್ಯಕೀಯ ಉತ್ಪನ್ನಗಳು ಕುಟುಂಬಗಳ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ, ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ, ಎಲ್ಲ ವೈದ್ಯಕೀಯ ವಿಭಾಗಗಳಲ್ಲಿ ಕಳಪೆ ದರ್ಜೆಯ ಅಥವಾ ತಪ್ಪಾದ ವೈದ್ಯಕೀಯ ಉತ್ಪನ್ನಗಳ ವರದಿಗಳನ್ನು ಡಬ್ಲ್ಯುಎಚ್ ಓ  ಸ್ವೀಕರಿಸಿದೆ, ಇವುಗಳಲ್ಲಿ ಕ್ಯಾನ್ಸರ್ ಔಷಧಿ, ಗರ್ಭನಿರೋಧಕಕ್ಕೆ ಸಂಬಂಧಿಸಿದಔಷಧಿಗಳು ಸೇರಿದೆ.
ಸುಮಾರು 15 ವರ್ಷಗಳ ಹಿಂದೆ ಔಷಧಿಗಳ ಜಾಗತಿಕ ಮಾರಾಟವು ಮೊದಲ ಬಾರಿಗೆ 500 ಶತಕೋಟಿ ಡಾಲರ್ ಗಳಿಗಿಂತ ಹೆಚ್ಚಾಗಿತ್ತು. ಅಲ್ಲಿಂದೀಚೆಗೆ, ಇದು ಮತ್ತೆ ಎರಡು ಪಟ್ಟು ಹೆಚ್ಚಿದೆ, ಇದೀಗ ಜಾಗತಿಕ ಔಷಧಿ ಮಾರಾಟವು ಸುಮಾರು 1.1 ಟ್ರಿಲಿಯನ್ , ಅಮೆರಿಕನ್ ಡಾಲರ್ ಗೆ ಏರಿಕೆ ಆಗಿದೆ.  ಮಧ್ಯಮ ಪ್ರಮಾಣದ ಆರ್ಥಿಕತೆಯಲ್ಲಿ ಇದು ಬಹುದೊಡ್ಡ ಪ್ರಮಾಣದ ಉದ್ಯಮವಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com