ಸಮಾಜಕ್ಕೆ ನೀಡುವ ಕೊಡುಗೆ ಮುಖ್ಯ: ಕಲಾಂ
ಮೆರೀಲ್ಯಾಂಡ್ (ಅಮೆರಿಕ): ಪ್ರತಿಯೊಬ್ಬರೂ ತಾವು ಏನು ಗಳಿಸುತ್ತೇವೆ ಎಂಬುದಕ್ಕಿಂತ ಸಮಾಜಕ್ಕೆ ಪ್ರತಿಯಾಗಿ ನಿರಂತರವಾಗಿ ತಾವೇನು ನೀಡಬಲ್ಲೆವು ಎಂಬುದು ಮುಖ್ಯ ಎಂದು ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದ್ದಾರೆ.
ಅವರು ಅಮೇರಿಕದ ಮೇರಿಲ್ಯಾಂಡ್ನ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಷನ್ನಲ್ಲಿ ಇದೇ 26ರ ಭಾನುವಾರದಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೆಎಸ್ಎಸ್ ಮಹಾವಿದ್ಯಾಪೀಠದ ಗ್ರಂಥಮಾಲೆಯಿಂದ ಮಕ್ಕಳಿಗಾಗಿ ಪ್ರಕಟಿಸಿರುವ ಸಚಿತ್ರ ಕಿರುಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಬಸವೇಶ್ವರರ ಸಂದೇಶಗಳನ್ನು ಆಚರಣೆಗೆ ತಂದಾಗ ಸಮಾಜ ಸುಭಿಕ್ಷವಾಗಿರಲು ಸಾಧ್ಯ ಎಂದು ನುಡಿದರು. ಜೆಎಸ್ಎಸ್ನ ಕಾರ್ಯಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಅಕ್ಕದ ಅಧ್ಯಕ್ಷರಾದ ಅಮರನಾಥಗೌಡರು ಮಾತನಾಡಿ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಷನ್ನ ಬೆಳವಣಿಗೆಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಲು ಕರೆ ನೀಡಿದರು. ಅಕ್ಕದ ಕಾರ್ಯಾಧ್ಯಕ್ಷರಾದ ಡಾ. ವಿಶ್ವಮಿತ್ರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕುಮಾರ್ ರಾಜಶೇಖರ್ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಷನ್ ಇದುವರೆಗೆ ಸಾಗಿ ಬಂದ ಚಟುವಟಿಕೆಗಳನ್ನು, ಜೆಎಸ್ಎಸ್ ವಿ.ವಿ. ಕುಲಪತಿಗಳಾದ ಡಾ. ಬಿ. ಸುರೇಶ್ ಸಂಸ್ಥೆ ಹಾಗೂ ಮಿಷನ್ನ ಮುಂದಿನ ಧ್ಯೇಯೋದ್ದೇಶಗಳನ್ನು ಹಾಗೂ ಮಹೇಶ್ ನಾಗರಾಜಯ್ಯ ಹಿರಿಯ ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಮಿಷನ್ನಿನ ಕಾರ್ಯದರ್ಶಿ ನಾಗಶಂಕರ್ ಬಿಡುಗಡೆಯಾದ ಸಚಿತ್ರ ಕಿರುಪುಸ್ತಕಗಳ ಪರಿಚಯ ಮಾಡಿದರು. ಮಾಂಟ್ಗೋಮರಿ ಪ್ರತಿನಿಧಿಗಳಾದ ರೆವರೆಂಡ್ ಮ್ಯಾನ್ಸ್ ಫೀಲ್ಡ್ ಕೆನ್ಮನ್ರವರು ಆಧ್ಯಾತ್ಮಿಕತೆಯ ಸಂದೇಶಗಳ ಮೂಲಕ ಸರ್ವರ ಜೀವನ ಸುಧಾರಿಸಲು ಶ್ರಮಿಸುತ್ತಿರುವ ಮಿಷನ್ನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಸಿಂಧೂರಮೂರ್ತಿ ಪ್ರಾರ್ಥಿಸಿದರು. ಯೋಗ ಶಿಕ್ಷಕ ಸಂಜಾತ್ ಸೂಲಕುಂಟೆ ಸ್ವಾಗತಿಸಿದರು. ಬಾಲಕಿ ಸಾನಿಕ ಮಹಾಶೆಟ್ಟಿ ಬಸವೇಶ್ವರರ ವಚನಗಾಯನ, ಪ್ರತೀಕ್ಪಾಲ್ ಮತ್ತು ಪ್ರಜ್ವಲ್ ಕೇರನಳ್ಳಿ ಅತಿಥಿಗಳ ಪರಿಚಯ, ರಾಜೀವ್ ಮಹಾಜನ್ ವಂದಿಸಿದರು. ಜಯಶ್ರೀ ಜಗದೀಶ್, ತ್ರಿಶೂಲ್ ನಾಗೇನಹಳ್ಳಿ ನಿರೂಪಿಸಿದರು. ಅಮೇರಿಕದ ಹಿರಿಯ ನಾಗರೀಕರು, ಗಣ್ಯವ್ಯಕ್ತಿಗಳು, ಅನೇಕ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ದೇಶೀರೈಸ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

