ಮುಂಬೈ ಕನ್ನಡ ಸಂಘದಲ್ಲಿ ದತ್ತಿ ಉಪನ್ಯಾಸ
ಮುಂಬೈ: ಮುಂಬೈ ಮಾತುಂಗಾ ಪೂರ್ವದ ಮುಂಬೈ ಕನ್ನಡ ಸಂಘದ ಆಶ್ರಯದಲ್ಲಿ ಎರಡು ದತ್ತಿ ಉಪನ್ಯಾಸಗಳು ಸಂಘದ ವಾಚನಾಲಯದಲ್ಲಿ ಇತ್ತೀಚೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಎಸ್. ನಾಯಕ್ ವಹಿಸಿದ್ದರು. ಖಾಲ್ಸಾ ಕಾಲೇಜು ಕನ್ನಡಪ್ರೇಮಿ ಮಂಡಳಿ ದತ್ತಿ ಉಪನ್ಯಾಸಕರಾಗಿ ಮುಂಬೈ ನ್ಯಾಯವಾದಿ, ಸಾಹಿತಿ, ಕವಿ ಹಾಗೂ ಹವ್ಯಕ ಸಂದೇಶ ಪತ್ರಿಕೆಯ ಸಂಪಾದಕರಾಗಿರುವ ಅಮಿತಾ ಎಸ್. ಭಾಗ್ವತ ಅವರು ಹವ್ಯಕ ಜಾನಪದ ಹಾಡುಗಳಲ್ಲಿ ಮಹಿಳಾ ಸಂಘರ್ಷ ಎಂಬ ವಿಷಯದ ಮೇಲೆ ಉತ್ತಮವಾಗಿ ಉಪನ್ಯಾಸ ನೀಡಿದರು. ಅವರು ತಮ್ಮ ಉಪನ್ಯಾಸದಲ್ಲಿ ಹವ್ಯಕ ಎಂಬ ಶಬ್ದದ ವಿವರಣೆ ನೀಡಿ ಹವ್ಯಕ ಬ್ರಾಹ್ಮಣರ ಆಚಾರ-ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದರು. ದಿ. ಜಿ.ವಿ. ರಂಗಸ್ವಾಮಿ ದತ್ತಿ ಉಪನ್ಯಾಸಕರಾಗಿ ಮುಂಬೈಯ ನಾಟಕಕಾರ, ಸಾಹಿತಿ ಮತ್ತು ಸಂಘಟಕ ನಾರಾಯಣ ಶೆಟ್ಟಿ ನಂದಳಿಕೆ 'ನಾಟಕದ ಮೂಲ ಪಠ್ಯರಂಗ ಪ್ರಯೋಗತೆ ಸಾಧ್ಯತೆಗಳು' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ, ಮುಂಬೈಯ ಕನ್ನಡ ಮತ್ತು ತುಳು ರಂಗಭೂಮಿಯ ಬಗ್ಗೆ ವಿವರವಾಗಿ ತಿಳಿಸಿದರು. ಅಲ್ಲದೇ ಕನ್ನಡ ಪ್ರೇಕ್ಷಕರ ಕೊರತೆ ಬಗ್ಗೆ, ರಂಗಪ್ರದರ್ಶನದ ಬಗ್ಗೆ ದಿಗ್ದರ್ಶಕರ ಬಗ್ಗೆ ತಿಳಿಸಿ ವಿವರವಾಗಿ ಉಪನ್ಯಾಸ ನೀಡಿದರು. ಅವರ ಪರಿಚಯವನ್ನು ಸುಬ್ರಾಯ ಶ್ಯಾನುಭೋಗರು ಮಾಡಿದರು. ದಿ. ಜಿ.ವಿ. ರಂಗಸ್ವಾಮಿ ದತ್ತಿ ನಿಧಿ ಪರವಾಗಿ ಸಂಘದ ಅಧ್ಯಕ್ಷ ಜಿ.ಎಸ್. ನಾಯಕರು ಪುಸ್ತಕ ಗೌರವ ಪುಷ್ಪಗುಚ್ಛ ಸಂಭಾವನೆ ನೀಡಿದರು. ಇದೇ ಸಂದರ್ಭದಲ್ಲಿ ಕೆಲವು ಸಾಹಿತ್ಯಾಭಿಮಾನಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಮಾಧವ ಮಾರ್ಕಂಡೇಯ ಪುಷ್ಪಗುಚ್ಛ ಸ್ವೀಕರಿಸಿದರು. ಸೋಮನಾಥ ನಿರೂಪಿಸಿದರು. ಎಚ್.ಎಸ್. ಆಡೂರ ವಂದಿಸಿದರು. ಸಂಧ್ಯಾಪ್ರಭು, ಎಸ್.ಕೆ. ಪದ್ಮನಾಭ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

