ಚಿತ್ರ ಕಲಾವಿದ, ಸಾಹಿತಿ ದತ್ತಾ ಅಂಬೇಕರಗೆ ಸತ್ಕಾರ

ಸಾಂಗಲಿ: ಇಲ್ಲಿಯ ಹಿರಿಯ ಚಿತ್ರ ಕಲಾವಿದ ದತ್ತಾ ಮಹಿಪತಿ ಅಂಬೇಕರ ಅವರಿಗೆ 75 ವರ್ಷಗಳು ತುಂಬಿದ ನೆನಪಿಗೆ ಅಮೃತ ಮಹೋತ್ಸವ ಮತ್ತು ಆತ್ಮ ಕಥನ ಗ್ರಂಥ ಬಿಡುಗಡೆ ಸಮಾರಂಭವು ಜ.19 ರಂದು ಸಾಂಗಲಿಯಲ್ಲಿ ಜರುಗಿತು. ಮೂಲತಃ ಜಮಖಂಡಿಯವರಾದ ದತ್ತಾ ಅಂಬೇಕರ ಅವರು ದೀರ್ಘಕಾಲ ಸಾತಾರದ ರೈತ ಶಿಕ್ಷಣ ಸಂಸ್ಥೆಯ ವಿದ್ಯಾಲಯಗಳಲ್ಲಿ ಚಿತ್ರಕಲಾ ಶಿಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸಾಂಗಲಿಯಲ್ಲಿ ನೆಲೆಸಿದ್ದಾರೆ. ಅನೇಕ ಪ್ರಸಿದ್ಧ ವ್ಯಕ್ತಿಗಳ ಬದುಕನ್ನಾಧರಿಸಿದ ವರ್ಣ ಚಿತ್ರ ಬಿಡಿಸಿ ಖ್ಯಾತರಾಗಿದ್ದಾರೆ. ಮಹಾರಾಷ್ಟ್ರಮತ್ತು ಕರ್ನಾಟಕ ಸರಕಾರಗಳು ಇವರನ್ನು ಸತ್ಕರಿಸಿ ಗೌರವಿಸಿವೆ. ಅಮೃತ ಮಹೊತ್ಸವ ಸಮಾರಭದಲ್ಲಿ ಕನ್ನಡದ ಹಿರಿಯ ಜಾನಪದ ತಜ್ಞ ಜಿ.ಬಿ.ಖಾಡೆ ಅಂಬೇಕರ ಅವರ ಆತ್ಮ ಕಥನ 'ರಂಗ-ರೇಷಾಂಚ್ಯಾ ಸಹವಾಸಾತ' ಕೃತಿಯನ್ನು ಬಿಡುಗಡೆ ಮಾಡಿದರು. ಮರಾಠಿಯ ಪ್ರಸಿದ್ಧ ಲೇಖಕ ಬಾಪು ಜಾಧವ ಅಧ್ಯಕ್ಷತೆ ವಹಿಸಿದ್ದರು. ಪ್ರಾ.ಬಿ.ಡಿ.ಚವ್ಹಾಣ, ಲೇಖಕ ಡಿ.ಬಿ.ಪಾಟೀಲ, ಡಾ.ದಾನೇಶ ಪೋತದಾರ ಪಾಲ್ಗೊಂಡಿದ್ದರು. ಅಶೋಕ ಖಾಡೆ ಹಾಗೂ ಡಾ.ಪ್ರಕಾಶ ಖಾಡೆ ಸತ್ಕರಿಸಿದರು. ರಾಜು ಅಂಬೇಕರ ಸ್ವಾಗತಿಸಿದರು. ದಾದಾಸಾಹೇಬ ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


