ಹೊರನಾಡು ಕನ್ನಡಿಗ

ಸಮೂಹದ ಒಳಿತೇ ರಂಗಭೂಮಿಯ ಕೆಲಸ: ಡಾ. ಶ್ರೀಪಾದಭಟ್

Published On :

ಮುಂಬಯಿ: ಸಮೂಹದ ಒಳಿತು, ಕರುಳಿನ ಮಿಡಿತ ಇವು ರಂಗಭೂಮಿಯ ಕೆಲಸ. ರಂಗಭೂಮಿ ಯುದ್ಧಪರವಾದ ಒಂದೇ ಒಂದು ಉದಾಹರಣೆ ಸಿಗಲಾರದು. ಅಭಿನಯ ಎಂದರೆ ಹತ್ತಿರಕ್ಕೆ ಒಯ್ಯುವುದು ಎಂದರ್ಥ. ಅಂಗಿಕ, ವಾಚಿಕ, ಆಹಾರ್ಯಂ...ಎಲ್ಲವನ್ನೂ ಒಳಗೊಳ್ಳುವ ನಿಯಮಬದ್ಧವಾದ ಆಟ ವೇ ನಾಟಕ ಎಂದು ಖ್ಯಾತ ರಂಗನಿರ್ದೇಶಕ ಡಾ. ಶ್ರೀಪಾದಭಟ್ ಹೇಳಿದ್ದಾರೆ.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಮಾ. 23ರಂದು ಸಂಘದ ಸಮರಸ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಭಾರತೀಯ ಚಿಂತನ-5ರ ಕಾರ್ಯಕ್ರಮದಲ್ಲಿ ಅವರು ರಂಗಭೂಮಿಯ ಸಾಂಸ್ಕೃತಿಕ ರೂಪಕಗಳ ವಿಷಯದಲ್ಲಿ ಉಪನ್ಯಾಸ ನೀಡಿದರು.
ರಂಗಭೂಮಿಯ ಸೆಕ್ಯುಲರಿಸಂನ್ನು ತನ್ನ ಒಡಲ ಒಳಗೆ ಇರಿಸಿದ್ದು, ನುಡಿ ಮತ್ತು ನಡೆ ಒಂದಾಗುವ ದೃಶ್ಯ ಕಾಣಬೇಕಾದರೆ ಅದು ರಂಗಭೂಮಿಯಿಂದ ಮಾತ್ರ ಸಾಧ್ಯ. ಎಲ್ಲ ಕಥನಗಳಿಗೂ ಒಗ್ಗಬಹುದಾದ ಫಾರ್ಮ್ ಅಂದರೆ ಥಿಯೇಟರ್ ಎಂದರು.
ಈ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ನಿರೂಪಿಸಿ, ಸ್ವಾಗತಿಸಿದರು. ಸಂಘದ ಅಧ್ಯಕ್ಷ ಪ್ರಕಾಶ್ ಬುರ್ಡೆ, ಉಪಾಧ್ಯಕ್ಷ ಭರತ್‌ಕುಮಾರ್ ಪೊಲಿಪು, ಉಪನ್ಯಾಸಕ ಡಾ. ಶ್ರೀಪಾದಭಟ್ ಅವರನ್ನು ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.