

ಮಂಡ್ಯ: ಇತ್ತೀಚೆಗಷ್ಟೇ ದಲಿತ ಯುವಕನೊಂದಿಗೆ ಮಗಳು ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂಬ ಕಾರಣಕ್ಕೆ ಮಂಡ್ಯದಲ್ಲಿ ಮೋನಿಕಾಳನ್ನು ಪೋಷಕರೇ ಹತ್ಯೆ ಮಾಡಿದ ಪ್ರಕರಣ ಇನ್ನು ಹಸಿರಿರುವಾಗಲೇ ಸಿಂದಘಟ್ಟ ಎಂಬಲ್ಲಿ ದಲಿತ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದೊಂದು ಮರ್ಯಾದಾ ಹತ್ಯೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯ ಕೆ.ಆರ್ .ಪೇಟೆ ತಾಲೂಕಿನ ಸಿಂದಘಟ್ಟದ ನಾಗೇಶ್ ಮೃತ ದುರ್ದೈವಿ. ಈತನ ವಿರುದ್ಧ ದಲಿತ ಯುವತಿಯನ್ನು ಪ್ರೀತಿಸಿ ಆಕೆ ಗರ್ಭವತಿಯಾಗಲು ಕಾರಣವಾಗಿದ್ದ ಎಂದು ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆತ ನಿಗೂಢವಾಗಿ ನಾಪತ್ತೆಯಾಗಿದ್ದ.
ಮಂಗಳವಾರ ಸಂಜೆ ಊರಿಗೆ ವಾಪಾಸಾಗಿದ್ದ ಆತ ನಿಗೂಢವಾಗಿ ಸಾವನ್ನಪ್ಪಿದ್ದು ಮರ್ಯಾದಾ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಕೆ.ಆರ್ ಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.