ನೀರಿಲ್ಲದೆ ಬಣಗುಡುತ್ತಿದೆ ನಗರದ 108 ಉದ್ಯಾನವನಗಳು

ನೀರಿನ ಬರ ನಗರದ ಉದ್ಯಾನವನಗಳ ಮೇಲೂ ಪರಿಣಾಮ ಬೀರಿದ್ದು, ನಗರದ 108 ಉದ್ಯಾನವನಗಳು ನೀರಿಲ್ಲದೆ ಬಣಗುಡುತ್ತಿದೆ...
ನೀರಿಲ್ಲದೆ ಬಣಗುಡುತ್ತಿದೆ ನಗರದ 108 ಉದ್ಯಾನವನಗಳು
ನೀರಿಲ್ಲದೆ ಬಣಗುಡುತ್ತಿದೆ ನಗರದ 108 ಉದ್ಯಾನವನಗಳು
Updated on: 

ಬೆಂಗಳೂರು: ನೀರಿನ ಬರ ನಗರದ ಉದ್ಯಾನವನಗಳ ಮೇಲೂ ಪರಿಣಾಮ ಬೀರಿದ್ದು, ನಗರದ 108 ಉದ್ಯಾನವನಗಳು ನೀರಿಲ್ಲದೆ ಬಣಗುಡುತ್ತಿದೆ.

ನಗರದ ದೊಡ್ಡ ಪಾರ್ಕ್ ಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ಗಳು ಪ್ರತಿ ನಿತ್ಯದಂತೆ ಟ್ಯಾಂಕ್ ನೀರಿನ ಮೂಲ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ಸಣ್ಣ ಪುಟ್ಟ ಪಾರ್ಕ್ ಗಳಿಗೆ ನೀರಿನ ಬರ ತಟ್ಟಿದ್ದು, ನೀರಿಲ್ಲದೆ ಗಿಡ ಮರಗಳು ಒಣಗುತ್ತಿವೆ.

ಇನ್ನು ಹೆಸರನ್ನು ಸೂಚಿಸದೆಯೇ ಬಿಬಿಎಂಪಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, 8 ವಿಭಾಗಗಳಲ್ಲಿನ ಉದ್ಯಾನವನಗಳು ನೀರಿನ ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಸ್ಥಾಯಿ ಸಮಿತಿ (ತೋಟಗಾರಿಕೆ) ಅಧ್ಯಕ್ಷೆ ಪದ್ಮಾವತಿ ನರಸಿಂಹಮೂರ್ತಿಯವರು ಮಾತನಾಡಿ, ನೀರಿನ ಸಮಸ್ಯೆ ಇರುವುದು ನಿಜ. ಉದ್ಯಾನವನಗಳ ಬಗ್ಗೆ ನಿರ್ಲಕ್ಷ್ಯವಹಿಸಿಲ್ಲ. ಕೆರೆಗಳಿಂದ ನೀರನ್ನು ತಂದು ಖಾಸಗಿ ಟ್ಯಾಂಕರ್ ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ  ವಿಜಯ್ ಭಾಸ್ಕರ್ ಅವರು ಮಾತನಾಡಿ, ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿರುವ 108 ಉದ್ಯಾನವನಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಈ  ಕಾರಣದಿಂದಲೇ ನಾವು ಅಂತಾರಾಷ್ಟ್ರೀಯ ಸಾಲ ನಿಧಿಯ ಮೂಲಕ ಹೊಸ ಯೋಜನೆಯನ್ನು ಹೊರ ತರುವ ಪ್ರಸ್ತಾವವನ್ನು ಇಟ್ಟಿದ್ದು ಎಂದು ಹೇಳಿದ್ದಾರೆ.

ಪ್ರಸ್ತಾವನೆ ಚರ್ಚೆಯ ಹಂತದಲ್ಲಿದೆ. ಈವರೆಗೂ ಈ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಪಾರ್ಕ್ ಗಳಿಗೆ ನೀರನ್ನು ಒದಗಿಸುವಂತೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೃಷ್ಣಾ ರಾಜ ಸಾಗರ ಅಣೆಕಟ್ಟಿನಲ್ಲಿ ಕಳೆದ ವರ್ಷದಂತೆಯೇ ಅರ್ಧದಷ್ಟು ನೀರಿದೆ. ಕುಡಿಯುವ ನೀರನ್ನು ಎಚ್ಚರಿಕೆಯಿಂದ ಬಳಸುವಂತೆ ಜನರಿಗೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com