ಮಳವಳ್ಳಿ ತಾಲೂಕಿನ ಜನಮನಹಳ್ಳಿ ಗ್ರಾಮದ ಕುಮಾರ್ ಅಲಿಯಾಸ್ ಕೇಬಲ್ ಕುಮಾರ ನನ್ನು ಕಳೆದ ರಾತ್ರಿ ಪಲ್ಸರ್ ಬೈಕ್ ನಲ್ಲಿ ಜನಮನಹಳ್ಳಿ ಗ್ರಾಮದಿಂದ ಹಲಗೂರಿಗೆ ಬರುತ್ತಿದ್ದ ವೇಳೆ ಆರ್ಎಕ್ಸ್ ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ ರಾಡ್ ನಿಂದ ದೇಹದ ವಿವಿಧೆಡೆ ಇರಿದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.