ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸ್ಥಳೀಯ ಭಾಷೆಗಳನ್ನು 2017ರ ನೀಟ್ ಪರೀಕ್ಷೆಯಲ್ಲಿ ಸೇರಿಸುವ ಬಗ್ಗೆ ನಾವು ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳಿದ್ದೆವು. ಕೆಲವು ರಾಜ್ಯ ಸರ್ಕಾರಗಳು ಉತ್ತರ ನೀಡಿರಲಿಲ್ಲ, ಅವುಗಳಲ್ಲಿ ಕರ್ನಾಟಕ ಕೂಡ ಒಂದು ಎನ್ನುತ್ತಾರೆ. ಎಲ್ಲಾ ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಹ ಡಿಸೆಂಬರ್ ಮೊದಲ ವಾರದಲ್ಲಿ ನಡೆದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಅಭಿಪ್ರಾಯ ನೀಡುವಂತೆ ಹೇಳಲಾಗಿತ್ತು. ಅವರು ಉತ್ತರ ನೀಡಲು ಇನ್ನಷ್ಟು ಸಮಯ ಕೇಳಿದ್ದಾರೆ ಎಂದರು.