

ಬೆಂಗಳೂರು: ಶೇಖಡ 100ರಷ್ಟು ಬಯೋ ಡೀಸೆಲ್ ಮೊದಲ ಬಸ್ ಪ್ರಾಯೋಗಿಕವಾಗಿ ಬೆಂಗಳೂರು-ಚೆನ್ನೈ ಮಾರ್ಗವಾಗಿ ಸಂಚರಿಸಲಿದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಸ್ ಗೆ ಇಂದು ಚಾಲನೆ ನೀಡಿದರು.
ಶಾಂತಿನಗರ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಬಯೋ ಡೀಸೆಲ್ ಬಸ್ ಗೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಯೋ ಡೀಸೆಲ್ ಬಸ್ ಅನ್ನು ಸ್ಕ್ಯಾನಿಯಾ ಕಂಪನಿ ನೀಡಿದ್ದು, ಸಾದಕ ಬಾದಕಗಳ ಪರಿಶೀಲನೆ ನಂತರ ಇನ್ನಷ್ಟು ಬಸ್ ಗಳನ್ನು ಖರೀದಿಸಲಾಗುವುದು ಎಂದರು.
ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನಿಗಮದ 1800 ಬಸ್ ಗಳಿಗೆ ಶೇ.20ರ ಪ್ರಮಾಣದಲ್ಲಿ ಬಯೋ ಡೀಸೆಲ್ ಬಳಸಲಾಗುತ್ತಿದೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಹಾಗೂ ಡೀಸೆಲ್ ಉಳಿತಾಯಕ್ಕೆ ಇದು ಸಹಕಾರಿಯಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.