

ಮಂಗಳೂರು: ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಸ್ಪೈಸ್ ಜೆಟ್ ನ ಇಬ್ಬರು ಸಿಬ್ಬಂದಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.
2566.05 ಗ್ರಾಂ ತೂಕದ 22 ಚಿನ್ನದ ತುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 15 ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ 75,26, 225 ರು, ಮೌಲ್ಯದ ಚಿನ್ನದ ಬಿಸ್ಕಟ್ ಗಳನ್ನು ವಶಪಡಸಿಕೊಳ್ಳಲಾಗಿದೆ ಎಂದು ಡಿಆರ್ ಐ ನಿರ್ದೇಶಕ ವಿನಾಯಕ್ ಭಟ್ ಹೇಳಿದ್ದಾರೆ.
ಈಗಾಗಲೇ ಆರು ಬಾರಿ ಈ ರೀತಿ ಚಿನ್ನ ಕಳ್ಳಸಾಗಣೆ ಮಾಡಿರುವುದಾಗಿ ಇಬ್ಬರು ಸ್ಪೈಸ್ ಜೆಟ್ ಉದ್ಯೋಗಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಹಣದ ಆಸೆಗಾಗಿ ತಾವು ಚಿನ್ನ ಕಳ್ಳಸಾಗಣೆ ಮಾಡಿದ್ದಾಗಿ ತಿಳಿಸಿದ್ದಾರೆ. ಏರ್ ಪೋರ್ಟ್ ಸರ್ವೀಸ್ ಹಿರಿಯ ಸಿಎಸ್ ಸಇ ಮೊಹಮದ್ ಹನೀಫ್ ಮತ್ತು ಸೆಕ್ಯೂರಿಟಿ ಆಫೀಸರ್ ಮುದ್ದಯ್ಯ ಎಂಬ ಈ ಸ್ಪೈಸ್ ಜೆಟ್ ಉದ್ಯೋಗಿಗಳನ್ನು ಕೂಡಲೇ ಜಾರಿಗೆ ಬರುವಂತೆ ಕಂಪನಿ ಅಮಾನತು ಮಾಡಿದೆ.