ಬಿಎಂಆರ್ಸಿಎಲ್ ನ ಪ್ರಧಾನ ಕಾರ್ಯದರ್ಶಿ ಇವಿ ರಮಣ ರೆಡ್ಡಿ ಅವರು ಮಾದ್ಯಮಗಳ ಜತೆ ಮಾತನಾಡಿ, ಬಿಎಂಟಿಸಿ ಕಳೆದ ತಿಂಗಳು ನಗದು ರಹಿತ ಸೇವೆ ಒದಗಿಸುವ ಸಲುವಾಗಿ ಸ್ಮಾರ್ಟ್ ಕಾರ್ಡ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದರ ಪ್ರಯೋಜನ ಪ್ರಯಾಣಿಕರಿಗೆ ಸೆಪ್ಟೆಂಬರ್ ನಲ್ಲಿ ಸಿಗಲಿದೆ. ಈ ಕಾರ್ಡ್ ಬಿಎಂಟಿಸಿ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರದೆ ಮೆಟ್ರೋ ಪ್ರಯಾಣಕ್ಕೂ ಬಳಕೆಯಾಗುವ ಸಾಧ್ಯತೆ ಇದೆ ಎಂದರು.