ಅನುಪಮಾ ಶೆಣೈ ಜೊತೆ ಸಂಪರ್ಕದಲ್ಲಿಲ್ಲ: ಸಹೋದರ ಅಚ್ಯುತ್ ಶೆಣೈ

ಅನುಪಮಾ ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ. ಆದರೆ, ಸಂದೇಶದ ಮೂಲಕ ನಾನು ಕ್ಷೇಮವಾಗಿದ್ದೇನೆ. ಬಳ್ಳಾರಿಯಲ್ಲಿದ್ದೇನೆಂದು ಹೇಳಿಕೊಂಡಿದ್ದಳು ಎಂದು ಅವರ ಸಹೋದರ ಅಚ್ಯುತ್...
ಅನುಪಮಾ ಶೆಣೈ
ಅನುಪಮಾ ಶೆಣೈ
Updated on: 

ಕಾರವಾರ: ಅನುಪಮಾ ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ. ಆದರೆ, ಸಂದೇಶದ ಮೂಲಕ ನಾನು ಕ್ಷೇಮವಾಗಿದ್ದೇನೆ. ಬಳ್ಳಾರಿಯಲ್ಲಿದ್ದೇನೆಂದು ಹೇಳಿಕೊಂಡಿದ್ದಳು ಎಂದು ಅವರ ಸಹೋದರ ಅಚ್ಯುತ್ ಶೆಣೈ ಅವರು ಹೇಳಿದ್ದಾರೆ.

ಈ ಕುರಿತಂತೆ ಭಟ್ಕಳದಲ್ಲಿ ಮಾತನಾಡಿರುವ ಸಂಬಂಧಿ ಅಪೂರ್ವ ಹಾಗೂ ಅಚ್ಯುತ್ ಶೆಣೈ ಅವರು, ನಾವು ಬಳ್ಳಾರಿಯಿಂದ ಒಟ್ಟಿಗೆ ಹೊರಟಿದ್ದೆವು. ಆದರೆ, ಮಾರ್ಗದ ಮಧ್ಯೆ ಪೊಲೀಸ್ ಅಧಿಕಾರಿಗಳೊಂದಿಗೆ ಅನುಪಮಾ ತೆರಳಿದ್ದರು. ನೀವು ಮುಂದೆ ಹೋಗಿ. ನಾನು ಬರುತ್ತೇನೆಂದು ಹೇಳಿ ಹೋಗಿದ್ದಳು. ನಂತರ ಯಾರಿಗೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಾನು ಕ್ಷೇಮವಾಗಿದ್ದೇನೆಂದು ಸಂದೇಶ ಕಳುಹಿಸಿದ್ದಳು. ಅಷ್ಟು ಅನುಪಮಾ ಬಗ್ಗೆ ಬೇರಾವುದೇ ಮಾಹಿತಿಗಳು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಒಬ್ಬ ಸಾಮಾನ್ಯ ವ್ಯಕ್ತಿ ಪಡಿತರ ಚೀಟಿ ಪಡೆಯಲು 6 ತಿಂಗಳ ಕಾಲ ಕಾಯುತ್ತಿರುತ್ತಾನೆ. ಆದರೆ, ಅನುಪಮಾ ರಾಜಿನಾಮೆ ಪತ್ರವನ್ನು ಕೇವಲ ನಾಲ್ಕು ದಿನಗಳಲ್ಲಿ ಅಂಗೀಕಾರವಾಗಿ ಹೋಯಿತು. ರಾಜೀನಾಮೆ ಪತ್ರವನ್ನು ಅಂಗೀಕರಿಸಿವುದಕ್ಕೂ ಮುನ್ನ ಸರ್ಕಾರ ಜನರ ಅಭಿಪ್ರಾಯವನ್ನು ಕೇಳಬೇಕಿತ್ತು ಎಂದು ರಾಜೀನಾಮೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅನುಪಮಾ ಅವರ ಮುಂದಿನ ಭವಿಷ್ಯದ ಯೋಜನೆ ಕುರಿತ ಪ್ರಶ್ನೆ ಬಗ್ಗೆ ಉತ್ತರಿಸಿರುವ ಅವರು, ಅನುಪಮಾ ಯಾವಾಗಲೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವಳು. ಸಮಾಜಘಾತುಕ ಶಕ್ತಿಗಳ ವಿರುದ್ಧವಷ್ಟೇ ನನ್ನ ಹೋರಾಟ ಎಂಬ ಸಂದೇಶವನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಆಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಳು ಎಂದು ಹೇಳಿದ್ದಾರೆ.

ಇದೇ ವೇಳೆ ನಕಲಿ ಫೇಸ್ ಬುಕ್ ಖಾತೆ ಕುರಿತಂತೆ ಮಾತನಾಡಿರುವ ಅವರು, ಈ ಕುರಿತು ಅನುಪಮಾ ಯಾವುದೇ ದೂರನ್ನು ದಾಖಲಿಸಿಲ್ಲ. ಸರ್ಕಾರ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com