ಕುಂದಾಪುರ ದುರ್ಘಟನೆ: ಗಾಯಗೊಂಡಿದ್ದ 5 ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ

ಕುಂದಾಪುರದಲ್ಲಿ ನಡೆದ ಶಾಲಾ ವಾಹನ ಭೀಕರ ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಐವರು ಮಕ್ಕಳು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ...
ಅಪಘಾತಕ್ಕೀಡಾಗಿರುವ ಶಾಲಾ ವಾಹನ
ಅಪಘಾತಕ್ಕೀಡಾಗಿರುವ ಶಾಲಾ ವಾಹನ
Updated on: 

ಮಣಿಪಾಲ್: ಕುಂದಾಪುರದಲ್ಲಿ ನಡೆದ ಶಾಲಾ ವಾಹನ ಭೀಕರ ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಐವರು ಮಕ್ಕಳು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಕಲ್ಲಿನ ಕಟ್ಟೆಯ ಹತ್ತಿರ ಬರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಭೀಕರ ಅಪಘಾತವೊಂದು ಸಂಭವಿಸಿತ್ತು. ದುರ್ಘಟನೆಯಲ್ಲಿ 8 ಮಕ್ಕಳು ದುರ್ಮರಣವನ್ನಪ್ಪಿದ್ದರು. ಅಲ್ಲದೆ, 34 ವರ್ಷದ ಫಿಲೋಮೆನಾ ಎಂಬ ಶಿಕ್ಷಕಿ ಸೇರಿ 5 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಗೊಂಡವರನ್ನು ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೀಗ ಶಿಕ್ಷಕಿ ಸೇರಿ ಎಲ್ಲಾ ಮಕ್ಕಳು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಮಕ್ಕಳಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯ ಡಾ.ದಿನೇಶ್ ಶೆಟ್ಟಿ ಮಾತನಾಡಿ, ಶಿಕ್ಷಕಿಗೆ ಮೂಳೆ ಮುರಿದಿದೆ. ಚಿಕಿತ್ಸೆ ನೀಡಲಾಗಿದೆ. ಆದರೆ, ಆಕೆಗೆ ಮತ್ತಷ್ಟು ದಿನಗಳ ಕಾಲ ವಿಶ್ರಾಂತಿಯ ಅವಶ್ಯಕವಿದೆ ಎಂದು ಹೇಳಿದ್ದಾರೆ.

ಉಡುಪಿ-ಚಿಕ್ಕಮಗಳೂರು ಶಾಸಕಿ ಶೋಬಾ ಕರಂದ್ಲಾಜೆಯವರು ಮಾತನಾಡಿ, ಗಾಯಗೊಂಡ ಮಕ್ಕಳನ್ನು ಶೀಘ್ರದಲ್ಲೇ ಭೇಟಿಯಾಗುತ್ತೇನೆ. ಘಟನೆ ಕುರಿತಂತೆ ಎಸ್ ಪಿ. ಕೆ. ಅನ್ನಾಮಲೈಅವರೊಂದಿಗೆ ಮಾತನಾಡಿದ್ದು, ಹೆದ್ದಾರಿಯಲ್ಲಿ ಚಲಿಸುವ ಶಾಲಾ ವಾಹನಗಳ ವೇಗ ಮಿತಿಯನ್ನು ಕಡಿಮೆ ಮಾಡುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com