ಧಾರವಾಡ: ಬೈಕ್ ನಲ್ಲಿ ಬ್ಯಾಂಕ್ಗೆ ಹಣ ಕಟ್ಟಲು ಹೊರಟಿದ್ದ ವ್ಯಕ್ತಿಯೊಬ್ಬರ ಬಳಿ ಇದ್ದ 16 ಲಕ್ಷ ರುಪಾಯಿಯನ್ನು ಕಸಿದುಕೊಂಡು ಪರಾರಿಯಾಗಿರವ ಘಟನೆ ಶನಿವಾರ ಮಧ್ಯಾಹ್ನ ಧಾರವಾಡದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ 2.30ರ ಸುಮಾರಿಗೆ ಬ್ಯಾಂಕ್ ಗೆ ಹಣ ಕಟ್ಟಲು ಹೊರಟಿದ್ದ ಸತ್ತೂರಿನ ಪಿಎನ್ಆರ್ ಜೆಸಿಬಿ ಉದ್ಯೋಗಿ ಎಂ.ಎಸ್. ಕಮ್ಮಾರ ಅವರನ್ನು ಮತ್ತೊಂದು ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಮ್ಮಾರ ಅವರನ್ನು ತಡೆದು ತಳ್ಳಾಡಿ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಒಂದೇ ಬೈಕ್ನಲ್ಲಿ ಬಂದಿದ್ದ ಮೂವರೂ ಹೆಲ್ಮೆಟ್ ಧರಿಸಿದ್ದರು. ಅಲ್ಲದೇ ಬೈಕ್ಗೆ ನಂಬರ್ ಪ್ಲೇಟ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.