ಕರ್ನಾಟಕ ಪೊಲೀಸರ ಕಣ್ಗಾವಲಿಗೆ ಡ್ರೋನ್ ಸಾಥ್

ದುಷ್ಕರ್ಮಿಗಳ ಮೇಲೆ ಕಣ್ಣಿಡಲು ಕರ್ನಾಟಕ ಪೊಲೀಸ್ ಇಲಾಖೆಗೆ ಈಗ ‘ಡ್ರೋನ್’ (ಚಾಲಕರಹಿತ ಪುಟ್ಟ ವಿಮಾನ) ಸಾಥ್ ನೀಡುತ್ತಿದ್ದು, ಅಕ್ರಮ ಚಟುವಟಿಕೆ ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಇವು ನೆರವಾಗಲಿದೆ...
ಕರ್ನಾಟಕ ಪೊಲೀಸ್ ಮತ್ತು ಡ್ರೋನ್ ಕ್ಯಾಮೆರಾ (ಸಂಗ್ರಹ ಚಿತ್ರ)
ಕರ್ನಾಟಕ ಪೊಲೀಸ್ ಮತ್ತು ಡ್ರೋನ್ ಕ್ಯಾಮೆರಾ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ದುಷ್ಕರ್ಮಿಗಳ ಮೇಲೆ ಕಣ್ಣಿಡಲು ಕರ್ನಾಟಕ ಪೊಲೀಸ್ ಇಲಾಖೆಗೆ ಈಗ ‘ಡ್ರೋನ್’ (ಚಾಲಕರಹಿತ ಪುಟ್ಟ ವಿಮಾನ) ಸಾಥ್ ನೀಡುತ್ತಿದ್ದು,  ಅಕ್ರಮ ಚಟುವಟಿಕೆ ಪತ್ತೆ ಹಚ್ಚುವಲ್ಲಿ  ಪೊಲೀಸರಿಗೆ ಇವು ನೆರವಾಗಲಿದೆ.

ದೇಶದ ಪೊಲೀಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಡ್ರೋನ್ ಬಳಕೆ ಮಾಡುತ್ತಿರುವ ಮೊದಲ ರಾಜ್ಯ ಎಂಬ ಖ್ಯಾತಿಗೂ ಕರ್ನಾಟಕ ಪಾತ್ರವಾಗಲಿದೆ. ಮೂಲಗಳ ಪ್ರಕಾರ ಕರ್ನಾಟಕ  ಪೊಲೀಸ್ ಇಲಾಖೆ ಮತ್ತು ದಕ್ಷಿಣ ಕೊರಿಯಾದ ಡ್ರೋನ್ ತಯಾರಿಕಾ ಸಂಸ್ಥೆಯ ನಡುವೆ ಒಪ್ಪಂದವಾಗಿದ್ದು, ಒಟ್ಟು 12 ಡ್ರೋನ್ ಗಳನ್ನು ಖರೀದಿಸಲು ಇಲಾಖೆ ಮುಂದಾಗಿದೆ. ಒಂದು ಡ್ರೋನ್  ಬೆಲೆ 1.5 ಲಕ್ಷ ರು. ಇದ್ದು, ಈ ಡ್ರೋನ್ 30 ನಿಮಿಷಗಳ ಕಾಲ 1 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.

ತಾಂತ್ರಿಕ ವಿಚಾರಕ್ಕೆ ಬರುವುದಾದರೆ 18.2 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮರಾ ಅಳವಡಿಸಲಾಗಿದ್ದು, ರಾತ್ರಿ  ಕತ್ತಲಲ್ಲೂ ಚಿತ್ರೀಕರಣ ಮಾಡುವ ಸಾಮರ್ಥ್ಯ ಹೊಂದಿದೆ. 5 ಕಿ.ಮೀ  ದೂರದವರೆಗೆ ನಡೆಯುವ ಚಟುವಟಿಕೆಯನ್ನು ಇದು ಚಿತ್ರೀಕರಿಸಲಿದೆ. 12 ಡ್ರೋನ್‌ಗಳನ್ನು ಈಗಾಗಲೇ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಕಾರ್ಯಾಚರಣೆ ಬಗ್ಗೆ 20 ಪೊಲೀಸರಿಗೆ  ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖವಾಗಿ ಈ ಡ್ರೋನ್ ಗಳನ್ನು ಅಕ್ರಮ ಮರಳು ಗಣಿಗಾರಿಕೆ ಮತ್ತು ಗಣ್ಯರ ಭದ್ರತೆಗಾಗಿ ಖರೀದಿಸಲಾಗಿದೆ ಎಂದು  ತಿಳಿದುಬಂದಿದೆ.

ಮರಳು ಗಣಿಗಾರಿಕೆ, ಗಣ್ಯರ ಭದ್ರತೆಗಾಗಿ ಡ್ರೋನ್ ಬಳಕೆ
ಮೊದಲ ಹಂತವಾಗಿ, ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಭಾಗದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಮೇಲೆ ನಿಗಾ ಇಡಲು ಡ್ರೋನ್ಗಳನ್ನು ಬಳಸಲಾಗುತ್ತಿದೆ. ಜನಸಮೂಹ ವೀಕ್ಷಣೆ,  ಅಕ್ರಮ ಕಟ್ಟಡಗಳ ನೆಲಸಮ, ಒತ್ತುವರಿ ತೆರವು ಮಾಡುವಾಗ ಕಂದಾಯ ಇಲಾಖೆ ಅಧಿಕಾರಿಗಳೂ ಈ ಡ್ರೋನ್ ಗಳನ್ನು ಬಳಸಲಿದ್ದಾರೆ. ಆದರೆ, ಕಂದಾಯ ಇಲಾಖೆ ಬಾಡಿಗೆ ನೀಡಿ ಡ್ರೋನ್ಗಳನ್ನು  ಬಳಸಬೇಕಾಗುತ್ತದೆ. ಪ್ರಕಾರ ಕೊಪ್ಪಳ, ಯಾದಗಿರಿ, ಬಳ್ಳಾರಿ, ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಗೆ ಡ್ರೋನ್ಗಳನ್ನು ವಿತರಿಸಲಾಗಿದ್ದು, ಜತೆಗೆ ತರಬೇತಿ ಪಡೆದ ಸಿಬ್ಬಂದಿ ಯನ್ನೂ  ನಿಯೋಜಿಸಲಾಗಿದೆ. ಸಭೆ-ಸಮಾರಂಭಗಳಲ್ಲಿ ಜನಸಮೂಹ ವೀಕ್ಷಣೆ, ಗಣ್ಯ ವ್ಯಕ್ತಿಗಳ ಭದ್ರತೆ, ವಿಐಪಿಗಳು ಚಲಿಸುವ ಮಾರ್ಗದಲ್ಲಿ ಅಪಾಯ ಸೂಚನೆ ಅರಿಯಲು ಡ್ರೋನ್ ಹಾರಾಟ  ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com