ಬೆಂಗಳೂರು: ಬೆಂಗಳೂರಿನ ಇಂದಿರಾನಗರದಲ್ಲಿ ಓಲಾ ಕ್ಯಾಬ್‌ನ ಚಾಲಕನೊಬ್ಬ 31ರ ಹರೆಯದ ಮಹಿಳೆಯೊಂದಿಗೆ ಅನುಚಿತ ವರ್ತನೆ ಮಾಡಿರುವ ಬಗ್ಗೆ ಶನಿವಾರ ವರದಿಯಾಗಿದೆ.
ಮಹಿಳೆ ಇಂದಿರಾ ನಗರದಿಂದ ಬಿಟಿಎಂ ಫಸ್ಟ್ ಸ್ಟೇಜ್‌ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಸಿಎಂಹೆಚ್ ರಸ್ತೆಗೆ ತಲುಪುವ ವೇಳೆ ಚಾಲಕ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಮಹಿಳೆ ಬೊಬ್ಬೆ ಹಾಕುತ್ತಿದ್ದಂತೆ ಆತ ಕಾರು ಮತ್ತು ಕಾರಿನ ಡ್ರೈವಿಂಗ್ ಲೈಸನ್ಸ್ ನ್ನು ಬಿಟ್ಟು ಪರಾರಿಯಾಗಿದ್ದಾನೆ.
ಈ ಬಗ್ಗೆ ಮಹಿಳೆ ತಕ್ಷಣವೇ ಪೊಲೀಸರಿಗೆ ದೂರಕು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಾರನ್ನು ವಶ ಪಡಿಸಿಕೊಂಡಿದ್ದಾರೆ.
ಡ್ರೈವಿಂಗ್ ಲೈಸನ್ಸ್‌ನಿಂದ ಚಾಲಕನ ಹೆಸರು ಬಿಪಿ ಬಸವರಾಜು ಎಂದು ತಿಳಿದು ಬಂದಿದ್ದು, ಪರಾರಿಯಾಗಿರುವ ಆತನಿಗಾಗಿ ಶೋಧ ನಡೆಯುತ್ತಿದೆ.