ಕೋಲಾರದಲ್ಲಿ ಮರ್ಯಾದೆ ಹತ್ಯೆ: ಕತ್ತು ಹಿಸುಕಿ ಮಗಳನ್ನೇ ಕೊಂದ ಪೋಷಕರು

ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಪೋಷಕರು ಮರ್ಯಾದೆಗೆ ಅಂಜಿ ಹೆತ್ತ ಮಗಳನ್ನೇ ಕತ್ತು ಹಿಸುಕಿ ಹತ್ಯೆ...
ಮರ್ಯಾದಾ ಹತ್ಯೆ
ಮರ್ಯಾದಾ ಹತ್ಯೆ
Updated on: 

ಶ್ರೀನಿವಾಸಪುರ: ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಪೋಷಕರು ಮರ್ಯಾದೆಗೆ ಅಂಜಿ ಹೆತ್ತ ಮಗಳನ್ನೇ ಕತ್ತು ಹಿಸುಕಿ ಹತ್ಯೆ ಮಾಡಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ತಮಟಂಪಲ್ಲಿಯಲ್ಲಿ 17 ವರ್ಷದ ಪ್ರಿಯಾ ಕೊಲೆಯಾದ ಯುವತಿಯಾಗಿದ್ದು, ಅನ್ಯ ಜಾತಿಯ ಹುಡುಗನನ್ನು ಮಗಳು ಪ್ರೀತಿಸುತ್ತಿದ್ದ ಆತನನ್ನೇ ಮದುವೆಯಾದರೆ ತಮ್ಮ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಪ್ರಿಯಾಳನ್ನು ಪೋಷಕರೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗೌನಿಪಲ್ಲಿ ಠಾಣಾ ಪೊಲೀಸರು ಆರೋಪಿ ಪ್ರಿಯಾಳ ತಂದೆ ಭೈರಾರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com