ಆಮಂತ್ರಣ ಪತ್ರಿಕೆಗೆ ಜನಾರ್ದನ ರೆಡ್ಡಿ ಖರ್ಚು ಮಾಡಿದ ಹಣ ಎಷ್ಟು ಗೊತ್ತೆ?

ಗಣಿಧಣಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ಮದುವೆಗೆ ಎಲ್‌.ಸಿ.ಡಿ ಪರದೆ ಹೊಂದಿರುವ ಆಮಂತ್ರಣ ಪತ್ರಿಕೆಗಾಗಿ ಬರೋಬ್ಬರೀ...
ಜನಾರ್ದನ ರೆಡ್ಡಿ ಪುತ್ರಿ ವಿವಾಹದ ಆಮಂತ್ರಣ ಪತ್ರಿಕೆ
ಜನಾರ್ದನ ರೆಡ್ಡಿ ಪುತ್ರಿ ವಿವಾಹದ ಆಮಂತ್ರಣ ಪತ್ರಿಕೆ
Updated on

ಬೆಂಗಳೂರು: ಗಣಿಧಣಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ಮದುವೆಗೆ ಎಲ್‌.ಸಿ.ಡಿ ಪರದೆ ಹೊಂದಿರುವ ಆಮಂತ್ರಣ ಪತ್ರಿಕೆಗಾಗಿ ಬರೋಬ್ಬರೀ 5 ಕೋಟಿ ರು. ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ.

ಆಮಂತ್ರಣ ಪತ್ರಿಕೆ ತೆರೆಯುತ್ತಿದ್ದಂತೆ ಸ್ವಯಂಚಾಲಿತವಾಗಿ ಎಲ್‌.ಸಿ.ಡಿ ಪರದೆ ಮೇಲೆ ವಿಡಿಯೊ ಮೂಡಿ ಬರುತ್ತದೆ. 2 ನಿಮಿಷ 37 ಸೆಕೆಂಡಿನ ಈ ವಿಡಿಯೊದಲ್ಲಿ ರೆಡ್ಡಿ ಕುಟುಂಬದ ಸದಸ್ಯರು ಹಾಡಿನ ಮೂಲಕ ಮದುವೆಗೆ ಆಹ್ವಾನಿಸಿದ್ದಾರೆ,

ಸಂಗೀತ ನಿರ್ದೇಶಕ ಹಂಸಲೇಖ ರಚಿಸಿರುವ ಗೀತೆಯನ್ನು ಅವರ ತಂಡದ ಸದಸ್ಯರೇ ಹಾಡಿದ್ದಾರೆ. ತೆಲುಗು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ವಿಡಿಯೊ ತಯಾರಿಸಲಾಗಿದೆ. ಆಯಾ ಭಾಷೆ ಮಾತನಾಡುವವರಿಗೆ ಆ ಭಾಷೆಯ ಆಮಂತ್ರಣ ಪತ್ರಿಕೆ ಕೊಡಲು ನಿರ್ಧರಿಸಲಾಗಿದೆ. ಚಲನಚಿತ್ರ ನಿರ್ದೇಶಕ ಸಾಯಿಕುಮಾರ್‌ ನೇತೃತ್ವದ ತಂಡವು ಈ ವಿಡಿಯೊ ಸಿದ್ಧಪಡಿಸಿದೆ. ಇದಕ್ಕಾಗಿ 15 ದಿನಗಳ ಕಾಲ ಹೈದರಾಬಾದ್‌ ನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಎಲ್‌.ಇ.ಡಿ ಪರದೆ ಹೊಂದಿರುವ ಆಮಂತ್ರಣ ಪತ್ರಿಕೆಗೆ ಸುಮಾರು  5 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ರೆಡ್ಡಿ ಮಾಧ್ಯಮಗಳಲ್ಲಿ ವರದಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com