ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಡೆ

ತೀವ್ರ ವಿವಾದಕ್ಕೊಳಗಾಗಿರುವ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸ್ಟೀಲ್ ಫ್ಲೈಓವರ್ (ಉಕ್ಕಿನ ಸೇತುವೆ) ನಿರ್ಮಾಣಕ್ಕೆ...
ಸ್ಟೀಲ್ ಫ್ಲೈಓವರ್ ನಕ್ಷೆ
ಸ್ಟೀಲ್ ಫ್ಲೈಓವರ್ ನಕ್ಷೆ
Updated on: 

ಬೆಂಗಳೂರು: ತೀವ್ರ ವಿವಾದಕ್ಕೊಳಗಾಗಿರುವ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸ್ಟೀಲ್ ಫ್ಲೈಓವರ್ (ಉಕ್ಕಿನ ಸೇತುವೆ) ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ಶುಕ್ರವಾರ ನಾಲ್ಕು ವಾರಗಳ ಕಾಲ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ವೆಚ್ಚದ ಸ್ಟೀಲ್ ಬ್ರಿಡ್ಜ್ ಫ್ಲೈಓವರ್ ನಿರ್ಮಾಣದಿಂದ ನೂರಾರು ಮರಗಳು ನಾಶವಾಗುತ್ತಿದ್ದು, ಇದು ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ದೂರಿ ಸಿಟಿಜನ್ ಫೋರಂ ತಮಿಳುನಾಡಿನ ಚೆನ್ನೈನಲ್ಲಿರುವ ಹಸಿರು ನ್ಯಾಯಾಧಿಕರಣದ ಮೆಟ್ಟಿಲೇರಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಈ ಸಂಬಂಧ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ರಾಜ್ಯ ಪರಿಸರ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಿದೆ.

ಹಸಿರು ನ್ಯಾಯಾಧಿಕರಣದ ಈ ತಡೆಯಾಜ್ಞೆಯಿಂದಾಗಿ ನವೆಂಬರ್ 1ರಿಂದ ಚಾಲನೆ ನೀಡಬೇಕು ಅಂದುಕೊಂಡಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ತೀವ್ರ ಹಿನ್ನಡೆ ಉಂಟಾದಂತಾಗಿದೆ.  ಸ್ಟೀಲ್ ಬ್ರಿಡ್ಜ್  ಯೋಜನೆ ಆರಂಭಿಸದಂತೆ ಬಿಡಿಎಗೆ ಗ್ರೀನ್ ಟ್ರಿಬ್ಯೂನಲ್ ಸೂಚನೆ ನೀಡಿದೆ.

ಬೆಂಗಳೂರಿನ ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳದವರೆಗೆ ನಿರ್ಮಾಣವಾಗಲಿರುವ ಬ್ರಿಡ್ಜ್ ನಿರ್ಮಾಣಕ್ಕೆ ಬಿಡಿಎ 95 ಕೋಟಿ ರುಪಾಯಿ ಹಣವನ್ನು ಕೂಡ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com