ಸುಪ್ರೀಂ ಕೋರ್ಟ್ ಆದೇಶದಂತೆ ಸೆಪ್ಟೆಂಬರ್ 7ರಂದು ತಮಿಳು ನಾಡಿಗೆ ನೀರು ಬಿಡಲು ಕರ್ನಾಟಕ ಆರಂಭಿಸಿತ್ತು. ಈಗಾಗಲೇ ಕಾವೇರಿ ಜಲಾನಯನದ 4 ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಸಾಮಾನ್ಯ ವರ್ಷಗಳಲ್ಲಿ ಇರುವ 94 ಟಿಎಂಸಿ ನೀರಿಗೆ ಬದಲಾಗಿ 46.79 ಟಿಎಂಸಿ ನೀರು ಮಾತ್ರ ಇದೆಯಷ್ಟೆ. ಇನ್ನು 28 ಟಿಎಂಸಿ ನೀರು ಬೆಂಗಳೂರು, ಮಂಡ್ಯ, ಮೈಸೂರು ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯಲು ಬೇಕಾಗಿದೆ.