ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ಕಿಡಿಗೇಡಿಗಳಿಗೆ ಪೊಲೀಸರ ಎಚ್ಚರಿಕೆ

ವಾಹನಗಳಿಗೆ ಬೆ೦ಕಿ ಹಚ್ಚುವ ಯುವಕರೇ ಎಚ್ಚರ... ಭಾವೋದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ನಿಮ್ಮ ಉಜ್ವಲ ಭವಿಷ್ಯ ನಿಮ್ಮ ಕೈಯ್ಯಾರೆ ನೀವೇ ಹಾಳು ಮಾಡಿಕೊಳ್ಳಬೇಡಿ ಎ೦ದು ಕಿಡಿಗೇಡಿಗಳಿಗೆ ಪೊಲೀಸರು ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾವೇರಿ ಗಲಭೆ (ಸಂಗ್ರಹ ಚಿತ್ರ)
ಬೆಂಗಳೂರಿನಲ್ಲಿ ಕಾವೇರಿ ಗಲಭೆ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ವಾಹನಗಳಿಗೆ ಬೆ೦ಕಿ ಹಚ್ಚುವ ಯುವಕರೇ ಎಚ್ಚರ... ಭಾವೋದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ನಿಮ್ಮ ಉಜ್ವಲ ಭವಿಷ್ಯ ನಿಮ್ಮ ಕೈಯ್ಯಾರೆ ನೀವೇ ಹಾಳು  ಮಾಡಿಕೊಳ್ಳಬೇಡಿ ಎ೦ದು ಕಿಡಿಗೇಡಿಗಳಿಗೆ ಪೊಲೀಸರು ಕಿವಿಮಾತು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿರುವ ಪೊಲೀಸರು, "ಬೆ೦ಕಿ ಹಚ್ಚುವ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಸುತ್ತಮುತ್ತಲ ಕಟ್ಟಡಗಳಲ್ಲಿ ಸಿಸಿ  ಕ್ಯಾಮರಾಗಳಿದ್ದರೆ ಅದರಲ್ಲೂ ರೆಕಾಡ್‍೯ ಆಗಿರುತ್ತದೆ. ಇದನ್ನೆಲ್ಲ ಪರಿಶೀಲಿಸಿ ನಿಮ್ಮ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಸಾರ್ವಜನಿಕ ಜೀವನಕ್ಕೆ ತೊಂದರೆ ಮಾಡುವಂತಹ ಇಂತಹ  ಅಪರಾಧಗಳಿಗೆ ಬೇಗ ಜಾಮೀನು ಸಿಗುವುದಿಲ್ಲ. ವರ್ಷಗಟ್ಟಲೆ ಕೋರ್ಟ್ ಗೆ ಅಲೆಯಬೇಕಾಗುತ್ತದೆ. ನಿಮ್ಮನ್ನೇ ಅವಲ೦ಬಿಸಿರುವ ಪಾಲಕರು ತೊ೦ದರೆ ಅನುಭವಿಸುತ್ತಾರೆ. ದಾರಿ ತಪ್ಪಿಸುವವರ  ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎ೦ದು ಪೊಲೀಸರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com