

ಬೆಂಗಳೂರು: ಕಾವೇರಿ ವಿವಾದದ ಸುತ್ತ ರಾಜಕೀಯ ಸುತ್ತುತ್ತಿರುವುದು ಆಸಕ್ತಿದಾಯಕ ಎನಿಸುತ್ತಿದೆ ಎಂದು ರಾಮಚಂದ್ರ ಗುಹಾ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಕಾಂಗ್ರೆಸ್ ಪಕ್ಷದ ಆಡಳಿತವಿದ್ದರೇ ಈ ಸಮಸ್ಯೆ ಬಹಳ ಹಿಂದೆಯೇ ಬಗೆ ಹರಿಯುತ್ತಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದು ಸುಪ್ರೀಂಕೋರ್ಟ್ ನಿರ್ಧರಿಸುವ ವಿಷಯವಲ್ಲ, ಅವರು ಇದರಲ್ಲಿ ಪರಿಣಿತರಲ್ಲ ಎಂದು ಎಂದು ಅವರು ತಿಳಿಸಿದ್ದಾರೆ.
ಕಾವೇರಿ ವಿಷಯವನ್ನು ರಾಷ್ಟ್ರೀಯ ಮಾಧ್ಯಮಗಳು ಕಡೆಗಣಿಸುತ್ತಿವೆ. ಎಲ್ಲಾ ರಾಷ್ಟ್ರೀಯ ಮಾಧ್ಯಮಗಳು ಭಾರತ ಮತ್ತು ಪಾಕ್ ಹಿಂದಂ ಓಡಿವೆ, ಆದರೆ ಪ್ರಸಕ್ತ ಸ್ಥಿತಿಯಲ್ಲಿ ತೈಲಕ್ಕಿಂತ ನೀರು ಮುಖ್ಯ ಎಂಬುದನ್ನು ಅರಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.