ಬಸಪ್ಪ ಹಣಮಂತಪ್ಪ ಭಜಂತ್ರಿ (55) ಹುತಾತ್ಮರಾದ ಯೋಧ ಎಂದು ಹೇಳಲಾಗುತ್ತಿದೆ. ಕಾಶ್ಮೀರದ ಉಪ ಚುನಾವಣೆಗೆಂದು ಬಸಪ್ಪ ಅವರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪಂಥಾ ಚೌಕ್ ಬಳಿ ಉಗ್ರರು ದಾಳಿ ನಡೆಸಿದ್ದರು. ದಾಳಿ ವೇಳೆ ಬಸಪ್ಪ ಅವರು ಸೇರಿದಂತೆ 6 ಸಿಆರ್ ಪಿಎಫ್ ಯೋಧರು ಹಾಗೂ ಇಬ್ಬರು ನಾಗರೀಕರು ಗಾಯಗೊಂಡಿದ್ದರು. ಕೂಡಲೇ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಬಸಪ್ಪ ಅವರು ಹುತಾತ್ಮರಾಗಿದ್ದರು.