ಐಟಿ ದಾಳಿ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಎದುರು ಮಾತನಾಡಿದ ಡಿಕೆ ಶಿವಕುಮಾರ್ ಹೇಳಿದ್ದೇನು?

ಅದಾಯ ತೆರಿಗೆ ಅಧಿಕಾರಿಗಳ ದಾಳಿ ಬಳಿಕ ಸತತ ನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಪ್ರತ್ಯಕ್ಷರಾದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು, ಸಚಿವರ ಭೇಟಿಯಾಗಿ, ಬಳಿಕ ನಾನು ನಂಬಿದ ದೇವರ ಮೊರೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಅದಾಯ ತೆರಿಗೆ ಅಧಿಕಾರಿಗಳ ದಾಳಿ ಬಳಿಕ ಸತತ ನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಪ್ರತ್ಯಕ್ಷರಾದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು, ಸಚಿವರ ಭೇಟಿಯಾಗಿ, ಬಳಿಕ  ನಾನು ನಂಬಿದ ದೇವರ ಮೊರೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಸದಾಶಿವ ನಗರದ ನಿವಾಸದ ಎದುರು ಸುದ್ದಿಗಾರರನ್ನು ಭೇಟಿ ಮಾಡಿದ ಡಿಕೆ ಶಿವಕುಮಾರ್ ಅವರು, ನನ್ನಿಂದಾಗಿ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ, ಹಾಗೂ ಮಾಧ್ಯಮಗಳಿಗೆ ಸಾಕಷ್ಟು ತೊಂದರೆಯಾಗಿದೆ. ಆದರೆ ನನ್ನ ಮನೆ,  ನನ್ನ ಸ್ನೇಹಿತರ ಹಾಗೂ ಸಂಬಂಧಿಕರ ಮನೆಗೆ ರಕ್ಷಣೆ ನೀಡಿದ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ಮಾಧ್ಯಮಗಳು ಸಂವಿಧಾನದ ಅಂಗವಾಗಿದ್ದು, ನಿಮ್ಮ ಕೆಲಸ ನೀವು ಮಾಡುತ್ತಿದ್ದೀರಿ. ಅದು ಪರವೋ ವಿರುದ್ಧವೋ  ಅದು ಬೇಕಿಲ್ಲ ಎಂದು ಹೇಳಿದರು.

ಅಧಿಕಾರಿಗಳ ತನಿಖೆ ಪೂರ್ಣ?
ಇದೇ ವೇಳೆ ತಮ್ಮ ಮನೆಯಲ್ಲಿ ಸತತ ಮೂರು ದಿನಗಳ ಠಿಕಾಣಿ ಹೂಡಿ ತನಿಖೆ ನಡೆಸಿದ್ದ ಐಟಿ ಆಧಿಕಾರಿಗಳ ಶೋಧ ಹಾಗೂ ವಿಚಾರಣೆ ಪೂರ್ಣಗೊಂಡಿರುವ ಕುರಿತು ಸ್ವತಃ ಡಿಕೆಶಿವ ಕುಮಾರ್ ಮಾಹಿತಿ ನೀಡಿದ್ದು, ಅಧಿಕಾರಿಗಳು  ವಾಪಸ್ ತೆರಳಿದ್ದಾರೆ ಎಂದು ಹೇಳಿದರು. ಇದೇ ವೇಳೆ ದಾಳಿ ಕುರಿತು ಈಗ ನಾನೇನೂ ಮಾತನಾಡುವುದಿಲ್ಲ. ಆದರೆ ಅಧಿಕಾರಿಗಳ ದಾಖಲೆಗಳ ಪಂಚನಾಮೆ ಸಂಪೂರ್ಣಗೊಂಡ ಬಳಿಕ ಅದರ ನಕಲನ್ನು ಪಡೆದು ಪರಿಶೀಲಿಸಿ ಬಳಿಕ  ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಬೆಂಬಲಿಸಿದವರಿಗೆ ವಂದನೆ
ಐಟಿ ದಾಳಿ ವೇಳೆ ನನ್ನನ್ನು ಬೆಂಬಲಿಸಿದ ಮತ್ತು ನನಗೆ ಪ್ರೋತ್ಸಾಹ ನೀಡಿದವರಿಗೆ ನಾನು ವಂದನೆ ತಿಳಿಸುತ್ತೇನೆ. ಐಟಿ ದಾಳಿಯಿಂದಾಗಿ ನನ್ನ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಮುಜುಗರವಾಗಿದೆ. ಆದರೆ ಈ ವೇಳೆಯಲ್ಲಿ ನನ್ನ ಬೆಂಬಲಕ್ಕೆ  ನಿಂತ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಕಾನೂನು ಚೌಕಟ್ಟು ಬಿಟ್ಟು ಸಂವಿಧಾನ ಬಿಟ್ಟು ನಾನು ಎಂದೂ ನಡೆದಿಲ್ಲ.  ಮುಂದೆ ನಾನು ದಾಖಲೆ ಸಹಿತವಾಗಿ ಮಾತನಾಡುತ್ತೇನೆ.  ಪ್ರತಿಯೊಬ್ಬರಿಗೂ ಉತ್ತರಿಸುತ್ತೇನೆ ಎಂದು ಹೇಳಿದರು.

ನನ್ನ ನಂಬಿದ ಸಚಿವರ ಭೇಟಿಯಾಗಿ, ಬಳಿಕ ನಾನು ನಂಬಿದ ದೇವರ ಮೊರೆ
ಇದೇ ವೇಳೆ ಮೊದಲು ನನ್ನ ನಂಬಿದ ಶಾಸಕರ ಭೇಟಿ ಮಾಡಿ ಬಳಿಕ ನಾನು ನಂಬಿದ ದೇವರ ಮೊರೆ ಹೋಗುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com