ಗಲಾಟೆ ಮಾಡುತ್ತಿದ್ದ ಮೂಗಿ ಮಗಳ ಮೇಲೆ ಸಿಟ್ಟು: 2 ಬಾರಿ ಮಹಡಿಯಿಂದ ಎಸೆದು ಪುತ್ರಿಯನ್ನು ಕೊಂದ ತಾಯಿ

ಪ್ರತಿಯೊಂದಕ್ಕೂ ಹಟ ಹಾಗೂ ಗಲಾಟೆ ಮಾಡುತ್ತಿದ್ದ ಮೂಗಿ ಮಗಳ ಮೇಲೆ ತೀವ್ರವಾಗಿ ಸಿಟ್ಟಗೊಂಡ ತಾಯಿಯೊಬ್ಬಳು 7 ವರ್ಷದ ಪುತ್ರಿಯನ್ನು 3ನೇ ಮಹಡಿಯಿಂದ ಎರಡು ಬಾರಿ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ನಗರದ ಜರಗನಹಳ್ಳಿಯಲ್ಲಿ ಭಾನುವಾರ ನಡೆದಿದೆ...
ಗಲಾಟೆ ಮಾಡುತ್ತಿದ್ದ ಮಗಳ ಮೇಲೆ ಸಿಟ್ಟು: 2 ಬಾರಿ ಮಹಡಿಯಿಂದ ಎಸೆದು ಪುತ್ರಿಯನ್ನು ಕೊಂದ ತಾಯಿ
ಗಲಾಟೆ ಮಾಡುತ್ತಿದ್ದ ಮಗಳ ಮೇಲೆ ಸಿಟ್ಟು: 2 ಬಾರಿ ಮಹಡಿಯಿಂದ ಎಸೆದು ಪುತ್ರಿಯನ್ನು ಕೊಂದ ತಾಯಿ
Updated on: 
ಬೆಂಗಳೂರು: ಪ್ರತಿಯೊಂದಕ್ಕೂ ಹಟ ಹಾಗೂ ಗಲಾಟೆ ಮಾಡುತ್ತಿದ್ದ ಮೂಗಿ ಮಗಳ ಮೇಲೆ ತೀವ್ರವಾಗಿ ಸಿಟ್ಟಗೊಂಡ ತಾಯಿಯೊಬ್ಬಳು 7 ವರ್ಷದ ಪುತ್ರಿಯನ್ನು 3ನೇ ಮಹಡಿಯಿಂದ ಎರಡು ಬಾರಿ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ನಗರದ ಜರಗನಹಳ್ಳಿಯಲ್ಲಿ ಭಾನುವಾರ ನಡೆದಿದೆ. 
ಇಶಿಕಾ ಅಲಿಯಾಸ್ ಶ್ರೇಯಾ (7) ತಾಯಿಯಿಂದಲೇ ಹತ್ಯೆಯಾದ ನತದೃಷ್ಟ ಬಾಲಕಿಯಾಗಿದ್ದಾಳೆ. ಪಶ್ಚಿಮ ಬಂಗಾಳದ ಮೂಲಕ ಸ್ವಾತಿ (26) ಹತ್ಯೆ ಮಾಡಿದ ತಾಯಿಯಾಗಿದ್ದಾಳೆ. 
ಮಗಳ ಹಟಕ್ಕೆ ಬೇಸತ್ತ ಸ್ವಾತಿ ತೀವ್ರವಾಗಿ ಕೆಂಡಾಮಂಡಲಗೊಂಡು ಮೊದಲು 3ನೇ ಮಹಡಿಯಿಂದ ಕೆಳಗೆ ಎಸೆದಿದ್ದಾಳೆ. ಬಳಿಕ ಕೆಳಗೆ ಬಂದು ಮಗು ಉಸಿರಾಡುತ್ತಿದ್ದೇಯೋ, ಇಲ್ಲವೋ ಎಂದು ಪರಿಶೀಲಿಸಿದ್ದಾಳೆ. ಮಗು ಉಸಿರಾಡುತ್ತಿರುವುದನ್ನು ಕಂಡು ಮತ್ತೊಮ್ಮೆ ಎತ್ತಿಕೊಂಡು ಹೋಗಿ ಪುನಃ ಮಹಡಿಯಿಂದ ಎಸೆದು ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. 
ಸ್ವಾತಿಯ ಈ ವರ್ತನೆಯನ್ನು ಕಂಡ ಸ್ಥಳೀಯರು ಆಕೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಟ್ಟಡದ ಮಾಲೀಕನ ಹಿರಿಯ ಪುತ್ರ ಬಾಲಾಜಿಯವರು, ಬಾಲಕಿಯನ್ನು ಮೊದಲು ಎಸೆದಾಗ ಬಾಲಕಿಯ ತಲೆ ಮೇಲ್ಚಾವಣಿಯ ಕಲ್ಲಿಗೆ ಹೊಡೆದಿದೆ. ನಂತರ ಬಾಲಕಿ ಕೆಳಗೆ ಬಿದ್ದಿದ್ದಳು. ಮಗಳನ್ನು ಕೆಳಗೆ ಎಸೆಯುವ ಹಕ್ಕು ನನಗಿದೆ ಎಂದು ಹೇಳುತ್ತಿದ್ದಳು ಎಂದು ಹೇಳಿದ್ದಾರೆ. 
ನಿನ್ನೆ ಸಂಜೆ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ವಾತಿ ಹಾಗೂ ಶ್ರೇಯಾ 3ನೇ ಮಹಡಿಯ ಮನೆಯಲ್ಲಿದ್ದರು. ಶ್ರೇಯಾ ನಿರಂತರವಾಗಿ ಹಟ ಮಾಡುತ್ತಿದ್ದಳು. ಇದರಿಂದ ತೀವ್ರವಾಗಿ ಕೋಪಗೊಂಡಿರುವ ತಾಯಿ ಸ್ವಾತಿ ಮಹಡಿಯಿಂದ ಪುತ್ರಿಯನ್ನು ಕೆಳಗೆ ಎಸೆದಿದ್ದಾಳೆ. ಈಗಾಗಲೇ ಸ್ವಾತಿಯನ್ನು ಬಂಧನಕ್ಕೊಳಪಡಿಸಲಾಗಿದ್ದು. ಮಗಳ ಅತಿಯಾದ ಹಟದಿಂದಾಗಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದೆ ಎಂದು ವಿಚಾರಣೆ ವೇಳೆ ಸ್ವಾತಿ ಹೇಳಿಕೊಂಡಿದ್ದಾರೆ. ಪರೀಕ್ಷೆ ವೇಲೆ ಸ್ವಾತಿ ಯಾವುದೇ ರೀತಿಯ ಖಿನ್ನತೆಗೊಳಗಾಗದಿರುವುದು ಕಂಡು ಬಂದಿತ್ತು ಎಂದು ಅಧಿಕಾರಿ ಹೇಳಿದ್ದಾರೆ. 
ದುರ್ಘಟನೆ ಸಂಭವಿಸುವುದಕ್ಕೂ ಗಂಟೆಗಳ ಹಿಂದಷ್ಟೇ ಸ್ವಾತಿ ತಮ್ಮ ಪುತ್ರಿಯೊಂದಿಗೆ ನಮ್ಮ ಅಂಗಡಿಗೆ ಬಂದಿದ್ದರು. ಅವರ ವರ್ತನೆ ಸಾಮಾನ್ಯವಾಗಿಯೇ ಇತ್ತು. ವರ್ತನೆಯಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ ಎಂದು ಸ್ಥಳೀಯ ಅಂಗಡಿಯ ಮಾಲೀಕ ಗೋವಿಂದ್ ರಾಜು ಎಂಬುವವರು ಹೇಳಿದ್ದಾರೆ. 
ಸ್ವಾತಿ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಇವರ ಪತಿ ಸರ್ಕಾರ ಇಂದಿರಾನಗರದಲ್ಲಿರುವ ಎಂಎನ್'ಸಿ ಕಂಪನಿಯಲ್ಲಿ ಆರ್ಥಿಕ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ. 
10 ವರ್ಷಗಳ ಹಿಂದಷ್ಟೇ ದಂಪತಿಗಳು ನಗರಕ್ಕೆ ಆಗಮಿಸಿದ್ದರು. ಕೌಟುಂಬಿಕ ಸಮಸ್ಯೆಗಳಿಂದಾಗಿ ತಿಂಗಳುಗಳಿಂದ ದಂಪತಿಗಳಿಬ್ಬರೂ ದೂರ ಉಳಿಸಿದ್ದರು. ಸರ್ಕಾರ ಸಿವಿ ರಾಮನ್ ನಗರದಲ್ಲಿ ಪ್ರತ್ಯೇಕ ವಾಸವಿದ್ದು, ಆಗಾಗ ಮನೆಗೆ ಬಂದು ಮನೆಯ ಬಾಡಿಗೆ ಹಾಗೂ ಹಣವನ್ನು ಕೊಟ್ಟು ಹೋಗುತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com