ಆನೆಕಲ್: ನೇಪಾಳಿ ಮಹಿಳೆ ಅತ್ಯಾಚಾರ, ಮೂವರ ಬಂಧನ

ಇಪ್ಪತ್ತಾರು ವರ್ಷದ ನೇಪಾಳಿ ಮಹಿಳೆಯನ್ನು ಅತ್ಯಾಛಾರ ಮಾಡಿದ್ದ ಪ್ರಕರಣದಲ್ಲಿ ಆನೇಕಲ್ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ್ತ
ಸಾಂದರ್ಭಿಕ ಚಿತ್ರ್ತ
Updated on
ಬೆಂಗಳೂರು: : ಇಪ್ಪತ್ತಾರು ವರ್ಷದ ನೇಪಾಳಿ ಮಹಿಳೆಯನ್ನು ಅತ್ಯಾಛಾರ ಮಾಡಿದ್ದ ಪ್ರಕರಣದಲ್ಲಿ ಆನೇಕಲ್ ಪೋಲೀಸರು ಮೂವರನ್ನು ಬಂಧಿಸಿದ್ದಾರೆ. "ಮಹಿಳೆಯನ್ನು ಕಟ್ಟಡದಿಂಡ ಹೊರಗೆ ದೂಡಿದ ಮೂವರನ್ನು ಆಕೆ ಗುರುತಿಸಿದ್ದು ಅವರನ್ನು ನಾವು ಬಂಧಿಸಿದ್ದೇವೆ" ಎಂದು ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದರು. 
ಇಲ್ಲಿಯವರೆಗೆ, 30 ಕ್ಕಿಂತ ಹೆಚ್ಚು ಶಂಕಿತರನ್ನು ವಿಚಾರಣೆ ನಡೆಸಿದರೂ ಯಾವ ಪ್ರಗತಿಯಾಗಿಲ್ಲ. ಘಟನೆಗೆ ಒಂದು ದಿನ ಮುನ್ನ ಶೆಲ್ಟರ್ ನ್ನು ಸ್ವಚ್ಛಗೊಳಿಸಲು ಕೆಲವು ಕಾರ್ಮಿಕರು ಬಂದಿದ್ದರು. ಬನ್ನೇರುಘಟ್ಟದ ವ್ಯಕ್ತಿಯು ಯುವತಿ ಶೆಲ್ಟರ್ ನಲ್ಲಿ ವಾಸವಾಗಿರುವುದನ್ನು ಕಂಡಿದ್ದು ಆಕೆಯನ್ನು ಅಲ್ಲಿಂದ ತೆರಳಲು ಸೂಚಿಸಿದ್ದರು.ಆಗ ಅವರು ಆಕೆಯ ಬಟ್ಟೆಗಳನ್ನು ಹೊರಕ್ಕೆ ಎಸೆದರು. ಅವರಲ್ಲಿ ಒಬ್ಬರು ಕಟ್ಟಡದ ನಿರ್ವಾಹಕರು ಎಂದು ಪೊಲೀಸರು ತಿಳಿಸುತ್ತಾರೆ. ಆದರೆ ಪೋಲೀಸರು ಬಂಧಿಸಿರುವ ಆರೋಪಿಗಳಲ್ಲಿ ಆ ವ್ಯಕ್ತಿ ಇರುವುದಿಲ್ಲ. ನವೆಂಬರ್ 23 ರಂದು ಆನೆಕಲ್   ಬಳಿ ಪಾಳುಬಿದ್ದ ಕಟ್ಟಡದಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಬಂದಿದ್ದ ಗುಂಪಿನಿಂದ  ನೇಪಾಳಿ ಮಹಿಳೆಯ ಅತ್ಯಾಚಾರ ನಡೆದಿತ್ತು.
ಏತನ್ಮಧ್ಯೆ, ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ ರವಿ ಹೇಳಿದಂತೆ, "ಇನ್ನೊಂದು ವಾರದಲ್ಲಿ ಆಕೆ ಸಹಜ ಸ್ಥಿತಿಗೆ ಬರಲಿದ್ದಾರೆ.  ಖಿನ್ನತೆ, ಆಘಾತದಿಂದ ಉಂಟಾದ ಒತ್ತಡದಿಂದ ಅಸ್ವಸ್ಥಗೊಂಡಿರುವ ಅವರಿಗೆ ಸೂಕ್ತ ಮಾನಸಿಕ  ಚಿಕಿತ್ಸೆ ನೀಡಲಾಗುತ್ತದೆ. ಡಿಸ್ ಚಾರ್ಜ್ ಆದ ನಂತರ ಆಕೆ ಎಲ್ಲಿಗೆ ತೆರಳಲಿದ್ದಾಳೆ ಎನ್ನುವುದನ್ನು ನಾವಿನ್ನೂ ಆಕೆಯನ್ನು ಕೇಳಿ ತಿಳಿಯಬೇಕಿದೆ"

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com