ಮಂಡ್ಯ: ಬಲಮುರಿ ಜಲಪಾತದಲ್ಲಿ ಈಜಲು ತೆರಳಿದ್ದ ಯುವಕ ಸಾವು

ಹೊಸವರ್ಷಾಚರಣೆಗೆ ಬಲಮುರಿ ಜಲಪಾತಕ್ಕೆ ವಿಹಾರ ಬಂದಿದ್ದ ಯುವಕನೊಬ್ಬ ನೀರಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.
ಬಲಮುರಿ ಫಾಲ್ಸ್
ಬಲಮುರಿ ಫಾಲ್ಸ್
Updated on: 
ಮಂಡ್ಯ: ಹೊಸವರ್ಷಾಚರಣೆಗೆ ಬಲಮುರಿ ಜಲಪಾತಕ್ಕೆ ವಿಹಾರ ಬಂದಿದ್ದ ಯುವಕನೊಬ್ಬ ನೀರಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. 
ಮೃತನನ್ನು ಮಹಮದ್ ಸಾಹಿಲ್ (19) ಎಂದು ಗುರುತಿಸಲಾಗಿದ್ದು ಕೇರಲದವನಾದ ಈತ ಮಂಗಲೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿದ್ದನೆನ್ನಲಾಗಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಹಮದ್ ತನ್ನ 15 ಜನ ಸ್ನೇಹಿತರೊಂದಿಗೆ ಇಂದು ಬಲಮುರಿಗೆ ಬಂದಿದ್ದನು. ಹೊಸ ವರ್ಷದ ಸಂಭ್ರಮದ ವೇಳೆ ಜಲಪಾತದ ನೀರಿನ ಸೆಳವಿಗೆ ಸಿಕ್ಕು ಸಾಯುವವರ ಸಂಖ್ಯೆ ಹೆಚ್ಚಾಗಿರಲಿದೆ ಎನ್ನುವ ಕಾರಣಕ್ಕೆ ಇಂದು ಹಾಗೂ ಣಾಳೆ ಜಲಪಾತ ಪ್ರವೇಶ ನಿಷೇಧ ಮಾಡಲಾಗಿತ್ತು. ಆದರೆ ನಿಷೇಧದ ನಡುವೆಯೂ ಪೋಲೀಸರ ಕಣ್ತಪ್ಪಿಸಿ ಈ ಯುವಕರು ನೀರಿಗಿಳಿದಿದ್ದರು. ಹಾಗೆ ನೀರಿಗಿಳಿದಿದ್ದಾಗ ಮಹಮದ್  ಸೆಳವಿಗೆ ಸಿಕ್ಕು ಸಾವನ್ನಪ್ಪಿದ್ದಾನೆ.
ಇನ್ನು ತಂದದ ಇನ್ನಿತರರ ಪತ್ತೆಗಾಗಿ ಪೋಲೀಸ್ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣ ಸಂಬಂಧ  ಕೆ.ಆರ್.ಸಾಗರ ಪೊಲೀಸ್ ಠಾಣೆಯಾಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com