ಕಂಪ್ಯೂಟರ್-ಸಹಾಯದ ವಿನ್ಯಾಸ ಮತ್ತು ಡ್ರಾಫ್ಟಿಂಗ್ ಇಂಜಿನಿಯರ್ ಆಗಿರುವ 23 ವರ್ಷದ ಸುರೇಶ್ ರಾವ್ ಎಂಬುವನು ನ್ಯೂ ಜನರೇಷನ್ ಸಂಸ್ಥೆಗೆ ಡಿಜೈನರ್ ಆಗಿ ಕೆಲಸ ಮಾಡುತ್ತಿದ್ದ. ತುರ್ತಿನಲ್ಲಿ ಹಣ ಸಂಪಾದನೆಗಾಗಿ ಅಡ್ಡ ದಾರಿ ಹಿಡಿದ ಸುರೇಶ್ ಬೇರೊಂದು ಸಂಸ್ಥೆ ಎಸ್ಬಿಟಿ ಅಸೋಸಿಯೇಟ್ಸ್ ಜತೆ ಈ ಸಂಸ್ಥೆಯ ಮಾಹಿತಿಯನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದು ಅದೇ ರೀತಿ ತನ್ನ ಇ-ಮೇಲ್ ನಿಂದ ಆ ಸಂಸ್ಥೆಗೆ ಮಾಹಿತಿ ರವಾನಿಸಿದ್ದ.