ರಾಘವೇಂದ್ರ ಜೈಲಿಗೆ ಬಂದಾಗಿನಿಂದ ಮಾನಸಿಕವಾಗಿ ನೊಂದಿದ್ದ. ಸಹ ಕೈದಿಗಳ ಮುಂದೆ ನನ್ನನ್ನ ನೋಡಲು ಯಾರೂ ಬಂದಿಲ್ಲ. ಜೈಲಿಗೆ ಬಂದು ಮೂರು ತಿಂಗಳಾಯ್ತು. ಸಂಬಂಧಿಕರು ಒಬ್ಬರೂ ಈ ಕಡೆ ಸುಳಿದಿಲ್ಲ. ಅಷ್ಟೇ ಅಲ್ಲ ಯಾರೂ ಕೊಡಿಸಲು ಬರುತ್ತಿಲ್ಲ ಎಂದು ನೊಂದುಕೊಂಡು ಸಹ ಕೈದಿಗಳ ಬಳಿ ಹೇಳಿಕೊಂಡಿದ್ದ. ಇದೇ ಕಾರಣಕ್ಕೆ ರಾಘವೇಂದ್ರ ಇಂದು ಬೆಳಗ್ಗೆ ಜೈಲಿನ ಶೌಚಾಲಯದ ಕಂಬಿಗೆ ಬೆಡ್‌ಶೀಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಧಿಕಾ ಹೇಳಿದ್ದಾರೆ.