ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಹಿರಿಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯನವರ ಪತ್ನಿ ಸ್ಮಿತಾ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೂನ್ 15 ರಂದು ಅಂದ್ರೆ ಎರಡು ದಿನಗಳ ಹಿಂದೆ ಸ್ಮಿತಾ ಪತ್ರ ಬರೆದಿದ್ದು 15 ನೇ ತಾರೀಕು ಮಧ್ಯರಾತ್ರಿ 2 ಗಂಟೆ ವೇಳೆಗೆ ನಮ್ಮ ಮನೆಯ ಹೊರಗಿನ ವರಾಂಡಾದಲ್ಲಿ ಶಬ್ದವಾಯಿತು. ಈ ವೇಳೆ ನಮ್ಮ ಮನೆಯ ನಾಯಿ ಬೊಗಳಿದೆ. ಯಾರೋ ಕಿಡಿಗೇಡಿಗಳು ಬಂದಿದ್ದಕ್ಕೆ ಸಾಕ್ಷಿಯಾಗಿ ಮರದ ಹಲಸಿನ ಕಾಯಿಗಳು ಉದುರಿವೆ.