ಬೆಂಗಳೂರು: ಭಾವಿ ಪತ್ನಿಯನ್ನು ಬಲವಂತದಿಂದ ಗರ್ಭಿಣಿ ಮಾಡಿದ, ಈಗ ಮದುವೆ ಆಗಲ್ಲ ಎಂದ!

ಭಾವಿ ಪತ್ನಿಯನ್ನು ಅತ್ಯಾಚಾರ ಮಾಡಿ ಬಳಿಕ ಆಕೆ ಗರ್ಭಿಣಿ ಎಂದು ತಿಳಿದಾಗ ಆಕೆಯನ್ನು ನಾನು ಮದುವೆಯಾಗಲ್ಲ ಎಂದು ವ್ಯಕ್ತಿ ಪಟ್ಟು ಹಿಡಿದಿದ್ದು ಈ ಸಂಬಂಧ ಯುವತಿ...
ನಿಶ್ಚಿತಾರ್ಥ(ಸಂಗ್ರಹ ಚಿತ್ರ)
ನಿಶ್ಚಿತಾರ್ಥ(ಸಂಗ್ರಹ ಚಿತ್ರ)
ಬೆಂಗಳೂರು: ಭಾವಿ ಪತ್ನಿಯನ್ನು ಅತ್ಯಾಚಾರ ಮಾಡಿ ಬಳಿಕ ಆಕೆ ಗರ್ಭಿಣಿ ಎಂದು ತಿಳಿದಾಗ ಆಕೆಯನ್ನು ನಾನು ಮದುವೆಯಾಗಲ್ಲ ಎಂದು ವ್ಯಕ್ತಿ ಪಟ್ಟು ಹಿಡಿದಿದ್ದು ಈ ಸಂಬಂಧ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 
ಅತ್ಯಾಚಾರ ಆರೋಪ ಎದುರಿಸುತ್ತಿರುವ ಸುರೇಶ್ ಎಂಬಾತ ನಿಶ್ಚಿತಾರ್ಥವಾದ ಬಳಿಕ ತನ್ನ ಭಾವಿ ಪತ್ನಿಯ ಮನೆಗೆ ತೆರಳಿ ಆಕೆಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. 
ಯುವತಿಯಲ್ಲಿ ಮನೆಯಲ್ಲಿ ಯಾರು ಇರದಿದ್ದ ಸಮಯದಲ್ಲಿ ಅಲ್ಲಿಗೆ ತೆರಳಿದ ಸುರೇಶ್ ಯುವತಿಗೆ ಚಾಕು ಸೇರಿಸಿ ಈ ದುಷ್ಕೃತ್ಯ ಎಸಗಿದ್ದಾನೆ. ನಂತರ ಆಕೆ ಗರ್ಭೀಣಿ ಎಂದು ತಿಳಿದಾಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಬಾರ್ಷನ್ ಮಾಡಿಸಿದ್ದಾನೆ. ನಂತರ ಯುವತಿಗೆ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೆದರಿಸಿದ್ದು ಸಂತ್ರಸ್ತ ಯುವತಿ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 
ಸಂತ್ರಸ್ತ ಯುವತಿ ಬೆಂಗಳೂರಿನ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com