3 ವಿದ್ಯಾರ್ಥಿಗಳ ಸಾವು ಪ್ರಕರಣ: ನಾಲ್ವರಿಗೆ ಜಾಮೀನು

ವಿಷ ಆಹಾರ ಸೇವನೆಯಿಂದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣದಲ್ಲಿ ಬಂಧಿತ ನಾಲ್ವರಿಗೆ ಶುಕ್ರವಾರ ಚಿಕ್ಕನಾಯಕನಹಳ್ಳಿಯ ಒಂದನೇ ಜೆಎಂಎಫ್ ಸಿ ನ್ಯಾಯಾಲಯ ಷರತ್ತುಬದ್ಧ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ತುಮಕೂರು: ವಿಷ ಆಹಾರ ಸೇವನೆಯಿಂದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣದಲ್ಲಿ ಬಂಧಿತ ನಾಲ್ವರಿಗೆ ಶುಕ್ರವಾರ ಚಿಕ್ಕನಾಯಕನಹಳ್ಳಿಯ ಒಂದನೇ ಜೆಎಂಎಫ್ ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 
ಬುಧವಾರ ರಾತ್ರಿಯ ಘಟನೆ ಹಿನ್ನಲೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಸೇರಿ ಒಟ್ಟು ಆರು ಮಂದಿಯ ವಿರುದ್ಧ ಗುರುವಾರ ಎಫ್ಐಆರ್ ದಾಖಲಾಗಿತ್ತು. 
ಹಾಸ್ಟೆಲ್ ನ ಅಡುಗೆ ಭಟ್ಟ ಶಿವಣ್ಣ, ಸಹಾಯಕಿ ರಂಗಲಕ್ಷ್ಮೀ, ಮೇಲ್ವಿಚಾರಕ ಸುಹಾಸ್ ಮತ್ತು ಮತ್ತೊಬ್ಬ ಸಹಾಯಕ ಜಗದೀಶ್ ರನ್ನು ಪೊಲೀಸರು ಗುರುವಾರವೇ ಬಂಧನಕ್ಕೊಳಪಡಿಸಿದ್ದರು. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾದ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ಅವರ ಪತ್ನಿ ತಲೆ ಮರೆಸಿಕೊಂಡಿದ್ದಾರೆ. 
ಹುಳಿಯಾರಿನ ವಿದ್ಯಾವಾರಿದಿ ಅಂತರಾಷ್ಟ್ರೀಯ ಶಾಲೆಯ ಹಾಸ್ಟೆಲ್ ನಲ್ಲಿ ವಿಷ ಆಹಾರ ಸೇವಿಸಿದ್ದ ವಿದ್ಯಾರ್ಥಿಗಳಾದ ಆಕಾಂಕ್ಷಾ ಪಲ್ಲಿಕ್ಕಿ, ಶ್ರೇಯಸ್ ಹಾಗೂ ಶಿವಮೂರ್ತಿ ಎಂಬ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಆದಾರ ಸೇವನೆ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ರಮೇಶ್ ಮತ್ತು ವಿದ್ಯಾರ್ಥಿ ಸುದರ್ಶನ್ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com