ಮೈಸೂರು: ಲಾರಿ-ಟೆಂಪೋ ಟ್ರಾವೆಲರ್ ಡಿಕ್ಕಿ, ಮೂವರ ಸಾವು, 12 ಜನರಿಗೆ ಗಾಯ

ಮೈಸೂರಿನ ಹುಣಸೂರು ರಸ್ತೆ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮೈಸೂರು: ಮೈಸೂರಿನ ಹುಣಸೂರು ರಸ್ತೆ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಲಾರಿ ಟೆಂಪೋ ಟ್ರಾವೆಲರ್ ನಡುವೆ ಸಂಭವಿಸಿದ ಅಪಗಾತದಲ್ಲಿ ಟೆಂಪೋ ದಲ್ಲಿದ್ದ 15 ಜನರಲ್ಲಿ ಮೂವರು ಮೃತಪಟ್ಟು 12 ಜನ ಗಾಯಗೊಂಡಿದ್ದಾರೆ.
ಮೀದ್(5೦), ಹಕೀಬ್ (18),ಇಕ್ಬಾಲ್ (36) ಮೃತಪಟ್ಟವರೆಂದು ಗುರುತಿಸಲಾಗಿದ್ದು ಇವರೆಲ್ಲರೂ ಮಂಗಳೂರಿನ ಉಳ್ಳಾಲ ಮೂಲದವರಾಗಿದ್ದಾರೆ.
ಮೃತ ಹಮೀದ್‌ ಸ್ಟಿಕ್ಕರ್‌ ಕಟ್ಟಿಂಗ್‌ ಅಂಗಡಿ ನಡೆಸಿದ್ದರೆ ಇಕ್ಬಾಲ್‌ ಕೆಲ ಕಾಲ ವಿದೇಶದಲ್ಲಿ ಇದ್ದು ವಾಪಾಸಾಗಿದ್ದರು. ಹಕೀಬ್‌ ವಿದ್ಯಾಭ್ಯಾಸ ನಡೆಸುತ್ತಿದ್ದರೆನ್ನಲಾಗಿದೆ. ಇವರೆಲ್ಲರೂ ಒಟ್ಟಾಗಿ ಮೈಸೂರು ಪ್ರವಾಸಕ್ಕಾಗಿ ಹೊರಟಿದ್ದರು ಎಂದು ಪೋಲೀಸ್ ಮಾಹಿತಿ ತಿಳಿಸಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com