ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಮುಡಿಗೆ 'ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿಯ ಗರಿ

ಮಂಗಳುರಿನ ಪ್ರಖ್ಯಾತ ಐಸ್ ಕ್ರೀಂ ತಯಾರಿಕಾ ಸಂಸ್ಥೆ ಐಡಿಯಲ್ ಐಸ್ ಕ್ರೀಂ 'ಗ್ರೇಟ್ ಇಂಡಿಯನ್ ಐಸ್ ಕ್ರೀಂ' ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.
ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಮುಡಿಗೆ 'ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿಯ ಗರಿ
ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಮುಡಿಗೆ 'ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿಯ ಗರಿ
Updated on
ಮಂಗಳೂರು: ಮಂಗಳುರಿನ ಪ್ರಖ್ಯಾತ ಐಸ್ ಕ್ರೀಂ ತಯಾರಿಕಾ ಸಂಸ್ಥೆ ಐಡಿಯಲ್ ಐಸ್ ಕ್ರೀಂ 'ಗ್ರೇಟ್ ಇಂಡಿಯನ್ ಐಸ್ ಕ್ರೀಂ' ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.
ಹರಿಯಾಣದ ಗುರುಗ್ರಾಮದಲ್ಲಿ ಗುರುವಾರ ನಡೆದ ಗ್ರೇಟ್ ಇಂಡಿಯನ್ ಐಸ್‍ ಕ್ರೀಂ ಹಾಗೂ ಫ್ರೋಜನ್ ಡೆಸಾರ್ಟ್ ಸೀಸನ್ 6 ಸ್ಪರ್ಧೆಯಲ್ಲಿ ಮಂಗಲೂರು ಸಂಸ್ಥೆಯು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ದೇಶದ ವಿವಿಧೆಡೆಯ 103 ಐಸ್ ಕ್ರೀಂ ಸಂಸ್ಥೆಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ  ಐಡಿಯಲ್ ಐಸ್ ಕ್ರೀಂ 3 ಬೆಸ್ಟ್ ಇನ್ ಇಂಡಿಯಾ ಅವಾರ್ಡ್ಸ್ ಮತ್ತು  4 ಚಿನ್ನ,1 ಬೆಳ್ಳಿ ಪದಕ ವನ್ನು ಗೆದ್ದಿದೆ ಎಂದು ಸಂಸ್ಥೆಯ ಮಾಲೀಕ ಮುಕುಂದ್ ಕಾಮತ್ ಮಾಹಿತಿ ನೀಡೀದ್ದಾರೆ. "1975ರಲ್ಲಿ ಪ್ರಾರಭವಾದ ಈ ಸಂಸ್ಥೆ ಐಸ್ ಕ್ರೀಂ ತಯಾರಿಕಾ ತಂಡದ ಸತತ ಪರಿಶ್ರಮ ಹಾಗೂ ಗ್ರಾಹಕರ ಪ್ರೀತಿಯಿಂದಾಗಿ ನಮಗೆ ಇಂದು ಈ ಪ್ರಶಸ್ತಿ ಲಭಿಸಿದೆ" ಎಂದರು
ಈ ಹಿಂದೆಯೂ ಐಡಿಯಲ್ ಐಸ್ ಕ್ರೀಂ 2013ರಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ವೆನಿಲ್ಲಾ ಫ್ಲೇವರ್ 3 ಪ್ರಶಸ್ತಿಗಳನ್ನು ಗೆದ್ದಿತ್ತು. ಈ ಬಾರಿಯ ಸ್ಪರ್ಧೆಗಾಘಿ ಸಂಸ್ಥೆ ಹೊಸದಾಗಿ ಅವಿಷ್ಕರಿಸಿದ್ದ ಮ್ಯಾಂಗೊ ಸೊರ್ಬೆಟ್, ಮರ್ಝಿ ಪಾನ್, ವೆನಿಲ್ಲಾ ಫ್ರೋಝನ್ ಡೆಸರ್ಟ್ ಐಸ್‍ಕ್ರೀಂ ಗಳು ಚಿನ್ನದ ಪದಕದ ಗೌರವಕ್ಕೆ ಪಾತ್ರವಾವಿವೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com