ಬೆಂಗಳೂರು-ಮೈಸೂರಿನಲ್ಲಿ ಮಳೆ: ತಮಿಳುನಾಡಿಗೆ ಹರಿದ 25 ಅಡಿ ಟಿಎಂಸಿ ನೀರು

ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ಮತ್ತು ಮೈಸೂರು ತತ್ತರಿಸಿದವು, ಆದರೆ ಈ ಮಳೆಯೇ ತಮಿಳುನಾಡಿಗೆ ವರವಾಗಿದೆ...
ಕೆಆರ್ ಎಸ್ ಜಲಾಶಯ
ಕೆಆರ್ ಎಸ್ ಜಲಾಶಯ
Updated on: 
ಮೈಸೂರು: ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ಮತ್ತು ಮೈಸೂರು ತತ್ತರಿಸಿದವು, ಆದರೆ ಈ ಮಳೆಯೇ ತಮಿಳುನಾಡಿಗೆ ವರವಾಗಿದೆ. 25 ಟಿಎಂಸಿಗೂ ಅಧಿಕ ನೀರು ಕರ್ನಾಟಕದ ನದೀ ತೀರದಿಂದ ತಮಿಳುನಾಡಿಗೆ ಹರಿದು ಹೋಗಿದೆ.
ಅಕ್ಟೋಬರ್ ತಿಂಗಳ ವರೆಗೆ ಕರ್ನಾಟಕ ತಮಿಳುನಾಡಿಗೆ 91.52 ಟಿಎಂಸಿ ನೀರು ಬಿಟ್ಟಿತ್ತು. ಬಿಳಿಗುಂಡಲು ಗೇಜಿಂಗ್ ಸ್ಟೇಷನ್ ನಿಂದ ತಮಿಳು ನಾಡಿಗೆ  ಸೆಪ್ಟಂಬರ್ ನಲ್ಲಿ 37 ಟಿಎಂಸಿ ನೀರು ಹರಿದಿರುವುದು ದಾಖಲಾಗಿದೆ. ಬಳಿಗುಂಡಲು ಗೇಜಿಂಗ್ ಸ್ಟೇಷನ್ ಹಿಂದಿರುವ ಎಂಎಂ ಹಿಲ್ಸ್, ಪಲಾರ್ ನದಿ, ಕಾವೇರಿ ವನ್ಯಪ್ರಾಣಿ ಧಾಮದಿಂದ,10 ಟಿಎಂಸಿ ಅಧಿಕ ನೀರು ಮೆಟ್ಟೂರು ಜಲಾಶಯಕ್ಕೆ ಹರಿದ ಹೋಗಿರುವುದು ದಾಖಲಾಗಿದೆ.
ಇನ್ನೂ ಬೆಂಗಳೂರಿ ಅರ್ಕಾವತಿ ನದಿಯ ಹೆಚ್ಚಿನ ನೀರು ಅಂದರೆ ಸುಮಾರು 11 ಟಿಎಂಸಿ ನೀರು ಕೂಡ ಮೆಟ್ಟೂರು ಜಲಾಶಯಕ್ಕೆ ಸೇರಿದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.
ಕೋಲಾರ ಜಿಲ್ಲೆಯ ಬಂಗಾರ ಪೇಟೆ, ಮಾಲೂರು, ಕೆಜಿಎಫ್,  ನಲ್ಲಿರುವ ಹಲವು ಕೆರೆಗಳು ನೀರು ಸಹ ಕರ್ನಾಟಕ-ತಮಿಳುನಾಡು ಸಮೀಪವಿರುವ ಹೊಗೈನೆಕಲ್ ಪಾಲ್ಸ್ ಗೆ ಹರಿದಿದೆ.
ಕೃಷ್ಣರಾಜ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 124.8 ಅಡಿ ಇದೆ. ಆದರೆ ಸದ್ಯ 114 ಅಡಿ ನೀರು ಸಂಗ್ರಹವಾಗಿದೆ. ಹೀಗಾಗಿ ಮುಂದಿನ ವರ್ಷದ ಜುಲೈವರೆಗೂ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದು, 
ಬೇಸಿಗೆ ಬೆಳೆಗಳಿಗೆ ನೀರು ಹರಿಸುವಂತೆ ಕೆಆರ್ ಎಸ್ ಮತ್ತು ಕಬಿನಿ ನದಿ ತೀರದ ರೈತರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com