ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಇಂದು ಬೆಳಗ್ಗೆ ಎರಡು ಜೀವಗಳು ಬಲಿಯಾಗಿವೆ. ಲಾರಿ ಅಡಿ ಸಿಕ್ಕಿ ತಾಯಿ, ಮಗಳು ಮೃತಪಟ್ಟಿದ್ದಾರೆ.
ಬೆಂಗಳೂರಿನ ಬಾಣಸವಾಡಿ ಬಳಿಯ ಬಾಬುಸಾಬ್‍ಪಾಳ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ತಮಿಳುನಾಡು ಮೂಲದವರಾದ ವೆಲ್ಲಾಚಿ (70), ವಸಂತಾ (45) ಮೃತರಾಗಿದ್ದಾರೆ.
ದೀಪಾವಳಿ ಹಬ್ಬ ಮಗಿಸಿ ತಮಿಳುನಾಡಿನಿಂದ ಬೆಂಗಳೂರಿಗೆ ವಾಪಾಸಾಗಿದ್ದ ಇಬ್ಬರೂ ಬಸ್ಸಿನಿಂದ ಇಳಿದು ಮನೆಗೆ ಹೋಗುತ್ತಿದ್ದ ಸಂದರ್ಭ ರಸ್ತೆ ದಾಟುತ್ತಿದ್ದಾಗ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಾಣಸವಾಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರೀಶೀಲನೆ ನಡೆಸಿದ್ದಾರೆ.