ಇದೇ ವೇಳೆ ಗೌರಿ ಲಂಕೇಶ್ ಅವರ ನಿವಾಸದ ಬಳಿ ಇರುವ ಮೊಬೈಲ್ ಟವರ್ ಗಳ ದತ್ತಾಂಶಗಳ ಸಂಗ್ರಹಕ್ಕೂ ಪೊಲೀಸರು ಮುಂದಾಗಿದ್ದು, ಗೌರಿ ಲಂಕೇಶ್ ಹತ್ಯೆಯಾಗುವ ಮುನ್ನ ಹಾಗೂ ಹತ್ಯೆಯಾದ ಬಳಿಕ ದುಷ್ಕರ್ಮಿಗಳು ಮಾಡಿರಬಹುದಾದ ಕರೆಗಳ ದತ್ತಾಂಶಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಪ್ರಮುಖವಾಗಿ ಗೌರಿ ಲಂಕೇಶ್ ಅವರ ನಿವಾಸ ಇರುವ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಪ್ರದೇಶದ ಸುತ್ತಮುತ್ತಲ ಟವರ್ ಗಳ ದತ್ತಾಂಶವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.