ಬೆಂಗಳೂರು : ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ಇಬ್ಬರ ಬಂಧನ

ಬೆಂಗಳೂರು : ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20 ಯುವಕರಿಗೆ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಹೆಬ್ಬಾಳ ನಿವಾಸಿ ಕೃಷ್ಣರಾಜನ್ (63) ಮತ್ತು ಕೆಜಿಎಫ್ ನಿವಾಸಿ ಸುಜಾತ (42) ಬಂಧಿತ ಆರೋಪಿಗಳು.
ಸೇನೆಯಲ್ಲಿ ಜವಾನ, ಚಾಲಕ, ಕ್ಲರ್ಕ್ಸ ಮತ್ತು ತಾಂತ್ರಿಕ ಸಿಬ್ಬಂದಿಯ ಹುದ್ದೆ ಕೂಡಿಸಿ ಸಹಾಯ ಮಾಡುವುದಾಗಿ ಆರೋಪಿಗಳು ಅಮಾಯಕ ಯುವಕರನ್ನು ನಂಬಿಸಿದ್ದರು. ಸೇನೆಯಲ್ಲಿರುವ ಕೆಲ ಹಿರಿಯ ಅಧಿಕಾರಿಗಳ ಪರಿಚಯವಿರುವುದಾಗಿ ಹೇಳಿ ಪ್ರತಿಯೊಬ್ಬರಿಂದ 2 ಲಕ್ಷ ರೂ. ಬೇಡಿಕೆಯಿಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಯೊಬ್ಬರಿಂದ ಮುಂಗಡ ಹಣವಾಗಿ 40 ಸಾವಿರ ರೂ. ಪಡೆದುಕೊಂಡು ಎರಡು ತಿಂಗಳ ಹಿಂದೆ ನಕಲಿ ವೈದ್ಯಕೀಯ ತಪಾಸಣೆಗಾಗಿ ಕೆಲ ಯುವಕರನ್ನು ಊಟಿ ಮತ್ತು ಮಧ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿ,ನೀವು ಸೇನೆಗೆ ಸೇರಲು ಅರ್ಹರಲ್ಲ ಎಂಬ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗಿತ್ತು.
ಸೇನೆಯಲ್ಲಿ ಕೆಲಸಕ್ಕೆ ಸೇರುವಂತೆ ಕೆಲ ಆಕಾಂಕ್ಷಿ ಯುವಕರಿಗೆ ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಲಾಗಿತ್ತು. ನಂತರ ತಾವೂ ಮೋಸ ಹೋಗಿರುವುದು ತಿಳಿದುಬಂದಿದ್ದು, ಹಗರಣ ಬೆಳಕಿಗೆ ಬಂದಿದೆ. ಇತ್ತೀಗಷ್ಟೇ ಪ್ರಕರಣ ಸಿಸಿಬಿಗೆ ವರ್ಗ ಆಗಿದ್ದು, ಪೊಲೀಸರು ಮೊಬೈಲ್ ಪೋನ್, ನಕಲಿ ನೇಮಕಾತಿ ಪತ್ರ. ವೈದ್ಯಕೀಯ ಪ್ರಮಾಣ ಪತ್ರಗಳನ್ನು ಅವರ ಮನೆಯಿಂದ ವಶಪಡಿಸಿಕೊಂಡದ್ದಾರೆ.
ಇಂತಹದ್ದೇ ವಂಚನೆ ಪ್ರಕರಣದಲ್ಲಿ ಈ ಹಿಂದೆಯೇ ಸುಜಾತ ಅವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


