

ಬೆಂಗಳೂರು: ಕೇರಳದ ಚೆಂಗನ್ನೂರಿನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಕುತ್ತಿಗೆಯವರೆಗೆ ಬಂದ ನೀರಿನಲ್ಲಿ ನಿಂತು ಸಹಾಯಕ್ಕಾಗಿ ಬೇಡಿಕೊಳ್ಳುವ ವಿಡಿಯೊ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕೇರಳ ರಾಜ್ಯದಲ್ಲಿನ ಪ್ರವಾಹದ ಭೀಕರತೆಯನ್ನು ಇದು ತೋರಿಸುತ್ತದೆ. ಬೆಂಗಳೂರಿನಲ್ಲಿರುವ ಕೇರಳಿಗರು ತಮ್ಮ ಊರಿನಲ್ಲಿ ಅಪಾಯದಲ್ಲಿರುವ ತಮ್ಮ ಕುಟುಂಬದವರ ಮನೆಗಳ ವಿಳಾಸವನ್ನು ಜಿಪಿಎಸ್ ಮೂಲಕ ಮತ್ತು ಕುಟುಂಬ ಸದಸ್ಯರ ದೂರವಾಣಿ ಸಂಖ್ಯೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿ ಸಹಾಯ ಮಾಡಿ ಎಂದು ಮೊರೆ ಹೋಗುತ್ತಿದ್ದಾರೆ.
ನಮ್ಮ ಫೇಸ್ ಬುಕ್ ಮುಖಪುಟದಲ್ಲಿ ಕೇರಳಿಗರಿಗೆ ಸಹಾಯ ಮಾಡಿ ಎಂದು ಹಲವರು ಮನವಿ ಮಾಡಿಕೊಳ್ಳುವುದನ್ನು ನೋಡಿದೆ. ಅವರಲ್ಲಿ ಕೆಲವರು ನನ್ನ ಸ್ನೇಹಿತರಾಗಿದ್ದಾರೆ. ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ತಮ್ಮ ಫೋನ್ ನಂಬರ್ ಮತ್ತು ಜಿಪಿಎಸ್ ಮನೆಯ ಲೊಕೇಶನ್ ನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದವುರ ಈ ಬಾರಿ ಏನಾದರೂ ಯಾರಿಂದಲಾದರೂ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ತಮ್ಮ ಕುಟುಂಬದವರಿಗೆ ಸಹಾಯ ಸಿಗಬಹುದೆಂಬ ನಿರೀಕ್ಷೆಯಿಂದ ಹಂಚಿಕೊಂಡಿದ್ದಾರೆ ಎನ್ನುತ್ತಾರೆ ಸಿಂಗಸದ್ರದ ನಿವಾಸಿ ಪ್ರದೀಪ್ ಆರ್.
ಕೇರಳದಲ್ಲಿ ಭಾರೀ ಪ್ರವಾಹದಿಂದಾಗಿ ರಸ್ತೆ, ರೈಲು ಮತ್ತು ವಾಯುಸಂಚಾರ ಸಂಪರ್ಕ ಕಡಿದಿದ್ದು ಹೀಗಾಗಿ ಬೆಂಗಳೂರಿನಲ್ಲಿರುವ ಅನೇಕ ಕೇರಳಿಗರಿಗೆ ತಮ್ಮ ಕುಟುಂಬದವರ ಜೊತೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಕೇರಳದಲ್ಲಿರುವ ತಮ್ಮ ಕುಟುಂಬದವರಿಗೆ ಏನಾಗಿರಬಹುದು ಎಂಬ ಆತಂಕದಲ್ಲಿ ಇಲ್ಲಿನ ಕೇರಳಿಗರಿದ್ದಾರೆ.
ಬೆಂಗಳೂರಿನಲ್ಲಿರುವ ಕೇರಳದ ಅಲುವಾದ ಜೆನ್ಸಿ ಥಾಮಸ್, ಇಂದು ಬೆಳಗ್ಗೆ ನನ್ನ ಪೋಷಕರೊಂದಿಗೆ ಮಾತನಾಡುವಾಗ ನನಗೆ ಆತಂಕ, ಬೇಸರವಾಯಿತು. ಮನೆಯೊಳಗೆ ನೀರು ನುಗ್ಗಿದ್ದು ನೀರಿನ ಮಟ್ಟ ಹೆಚ್ಚಾಗುತ್ತಿದೆ ಎಂದರು. ಎಲ್ಲಾ ಸಹಾಯವಾಣಿಗಳನ್ನು ಕರೆಯಲು ಪ್ರಯತ್ನಿಸುತ್ತಿದ್ದೇನೆ, ಆದರೆ ಸಾಧ್ಯವಾಗುತ್ತಿಲ್ಲ. ನನ್ನ ತಂದೆಯ ಮನೆಯ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಆನ್ ಲೈನ್ ನಲ್ಲಿ ಹಾಕಿದ್ದೇನೆ. ಯಾರಾದರೂ ನೋಡಿ ಸಹಾಯ ಮಾಡಲಿ ಎಂದು ಎನ್ನುತ್ತಾರೆ ಜೆನ್ಸಿ.
ಸಹಾಯ ಮಾಡಲು ಹೋಗೋಣವೆಂದರೆ ನಮಗೆ ಇಲ್ಲಿಂದ ಹೋಗಲು ಕೂಡ ಸಾಧ್ಯವಾಗುತ್ತಿಲ್ಲ. ಎಲ್ಲಾ ಸಂಚಾರ ಸಂಪರ್ಕಗಳು ಕಡಿದಿವೆ. ನನ್ನ ಪೋಷಕರು ಅಲ್ಲಿಂದ ಸ್ಥಳಾಂತರಗೊಳ್ಳುವುದು ಬೇಡವೆನ್ನುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡುವ ಬದಲು ಆನ್ ಲೈನ್ ಮೂಲಕ ಮೊರೆ ಹೋಗುತ್ತೇನೆ ಎಂದು ಕೇರಳದ ಕೊಜ್ಹೆಂಚೆರ್ರಿ ಜಿಲ್ಲೆಯ ಸಾಜು ಹೇಳುತ್ತಾರೆ.
ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ನಾಗರಿಕ ವಿಮಾನಯಾನ ದೆಹಲಿ-ಕೇರಳ ನಡುವೆ ಸಂಚಾರ ದರವನ್ನು 10 ಸಾವಿರಕ್ಕೆ ನಿಗದಿಪಡಿಸುವಂತೆ ಸೂಚನೆ ನೀಡಿತ್ತು. ಆದರೂ ಕೂಡ ದೆಹಲಿ-ತಿರುವನಂತಪುರ ಎಕಾನಮಿ ಕ್ಲಾಸ್ ನಲ್ಲಿ 30 ಸಾವಿರ ರೂಪಾಯಿ ದರ ವಿಧಿಸಲಾಗುತ್ತಿದೆ. ದೆಹಲಿ-ಕೋಝಿಕ್ಕೋಡ್ ನಡುವೆ ವಿಮಾನ ಟಿಕೆಟ್ ದರ 20 ಸಾವಿರವಾಗಿತ್ತು.