ಬೆಂಗಳೂರು: ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ ಆರ್ ಟಿಸಿ ತನ್ನ ಬಸ್ ಸೇವೆಗಳನ್ನು ಪುನಾರಂಭಿಸಿದೆ.
ಇಂದು ಸಂಜೆ 4 ಗಂಟೆಯಿಂದಲೇ ಕೆಎಸ್ ಆರ್ ಟಿಸಿ ಕೇರಳಕ್ಕೆ ತನ್ನ ಬಸ್ ಸಂಚಾರವನ್ನು ಆರಂಭಿಸಲಿದೆ. ಇಂದು ಸಂಜೆ 4 ಗಂಟೆಯಿಂದ ಎರ್ನಾಕುಲಂ, ಕೊಟ್ಟಾಯಂ, ತ್ರಿಶೂರ್, ಪಾಲ್ಘಾಟ್, ಕೋಳಿಕೋಡು, ಕಣ್ಣೂರು ಮತ್ತು ತಿರುವನಂತಪುರಂಕ್ಕೆ ಬಸ್ ಸೇವೆ ಆರಂಭಿಸಲಾಗುತ್ತಿದೆ.
ಇನ್ನು ಗಡಿ ಭಾಗದ ಕಾಸರಗೋಡಿಗೆ ಮಾತ್ರ ಬಸ್ ಸೇವೆ ವಿಳಂಬವಾಗಲಿದೆ.
ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಸಂಪೂರ್ಣ ಹಾಳಾಗಿತ್ತು,. ಹೆದ್ದಾರಿಗಳ ಮೇಲೆ ನೀರು ನಿಂತು ರಸ್ತೆ ಸಂಚಾರ ದುಸ್ತರವಾಗಿತ್ತು. ಈ ಹಿನ್ನಲೆಯಲ್ಲಿ ಕೇರಳಕ್ಕೆ ಕೆಎಸ್ ಆರ್ ಟಿಸಿ ಬಸ್ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದೀಗ ಕೇರಳಕ್ಕೆ ಪರಿಹಾರ ಸಾಮಗ್ರಿಗಳ ಅಗತ್ಯವಿದ್ದು, ಅಲ್ಲದೆ ಕೊಂಚ ಮಟ್ಟಿಗೆ ನೆರೆ ಇಳಿದ ಪರಿಣಾಮ ಕರ್ನಾಟಕದಿಂದ ಮತ್ತೆ ಬಸ್ ಸಂಚಾರ ಆರಂಭವಾಗಿದೆ.
#KeralaFloods: Karnataka State Road Transport Corporation (KSRTC) has restored all its services to Kerala's Ernakulam, Kottayam, Thrissur, Palghat, Kozhikode, Kannur and Trivandrum. First service to start at 4 pm to Trivandrum from Bengaluru. Services to Kasaragod not restored.