ರಾಜ್ಯದ 30 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲ!

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್ ಪದವಿ ಕೋರ್ಸ್ ಗಳಿಗೆ ಕಾಮೆಡ್ ಕೆಯಡಿ ರಾಜ್ಯದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್ ಪದವಿ ಕೋರ್ಸ್ ಗಳಿಗೆ ಕಾಮೆಡ್ ಕೆಯಡಿ ರಾಜ್ಯದ 30ಕ್ಕೂ ಹೆಚ್ಚು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲ.

2018-19ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರ ಮತ್ತು ಕಾಮೆಡ್ ಕೆಯಡಿ ಎಂಜಿನಿಯರಿಂಗ್ ಪದವಿ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಇತ್ತೀಚೆಗಷ್ಟೇ ಮುಗಿದಿದೆ. ಕಾಮೆಡ್ ಕೆಯಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ, ಕಾಮೆಡ್ ಕೆ ಕೋಟಾದಡಿ ಇರುವ ಸೀಟುಗಳಲ್ಲಿ ಶೇಕಡಾ 62ರಷ್ಟು ಸೀಟುಗಳು ಭರ್ತಿಯಾಗಿಲ್ಲ. ಈ ವರ್ಷ ಕಾಮೆಡ್ ಕೆಯಡಿ 16,236 ಸೀಟುಗಳು ಲಭ್ಯವಾಗಿದ್ದು ಅವುಗಳಲ್ಲಿ 10,175 ಸೀಟುಗಳು ಇನ್ನೂ ಖಾಲಿ ಉಳಿದಿವೆ.

ಕೆಲವು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲದಿದ್ದರೆ ಇನ್ನು ಕೆಲವು ಕಾಲೇಜುಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ಪ್ರವೇಶವಾಗಿದೆ.

ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಕಾಮೆಡ್ ಕೆಯಿಂದ ಸಿಕ್ಕಿದ ಮಾಹಿತಿ ಪ್ರಕಾರ, 33 ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲ. ಇನ್ನು 33 ಕಾಲೇಜುಗಳಲ್ಲಿ 10ಕ್ಕಿಂತ ಕಡಿಮೆ ಪ್ರವೇಶಾತಿಯಾಗಿದೆ. ರಾಜ್ಯದಲ್ಲಿ ಕೇವಲ 6 ಕಾಲೇಜುಗಳಲ್ಲಿ ಶೇಕಡಾ 100ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಇನ್ನು 10 ಕಾಲೇಜುಗಳಲ್ಲಿ ಶೇಕಡಾ 80ರಿಂದ 99ರಷ್ಟು ಸೀಟುಗಳು ಭರ್ತಿಯಾಗಿವೆ.

ಕಾಮೆಡ್ ಕೆ ಅಧಿಕಾರಿಗಳು ಮತ್ತು ಕಾಲೇಜು ವ್ಯವಸ್ಥಾಪಕ ಮಂಡಳಿ ಹೇಳುವ ಪ್ರಕಾರ, ಎಂಜಿನಿಯರಿಂಗ್ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ಹೊಸದಲ್ಲ. ಕಳೆದ ಎಂಟು ವರ್ಷಗಳಿಂದ ಇದೇ ಪರಿಸ್ಥಿತಿಯಿದೆ ಎನ್ನುತ್ತಾರೆ ಕಾಮೆಡ್ ಕೆ ಕಾರ್ಯನಿರ್ವಹಣಾ ಕಾರ್ಯದರ್ಶಿ ಡಾ ಎಸ್ ಕುಮಾರ್.
ಇತ್ತೀಚೆಗೆ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದಾರೆ. ಜಾಹಿರಾತುಗಳಿಗೆ ಮತ್ತು ಇತರ ಟೊಳ್ಳು ಭರವಸೆಗಳಿಗೆ ಮಾರು ಹೋಗುವುದಿಲ್ಲ. ಎಂಜಿನಿಯರಿಂಗ್ ಕಾಲೇಜುಗಳು ಮೂಲಸೌಕರ್ಯಗಳನ್ನು ಮತ್ತೆ ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎನ್ನುತ್ತಾರೆ ಕಾಮೆಡ್ ಕೆ ಅಧಿಕಾರಿಗಳು.

ಶೇಕಡಾ 100ರಷ್ಟು ಪ್ರವೇಶಾತಿ ಪಡೆದಿರುವ 6 ಕಾಲೇಜುಗಳು 1,349 ಸೀಟುಗಳನ್ನು ಹಂಚಿಕೊಂಡಿದ್ದು ರಾಜ್ಯದಲ್ಲಿನ ಪ್ರಮುಖ ಕಾಲೇಜುಗಳಾಗಿವೆ. 6 ಕಾಲೇಜುಗಳಲ್ಲಿ 4 ಬೆಂಗಳೂರಿನಲ್ಲಿ ಮತ್ತು ಎರಡು ಮೈಸೂರುಗಳಲ್ಲಿವೆ.

ಸಿವಿಲ್, ಮೆಕಾನಿಕಲ್ ವಿಭಾಗಕ್ಕೆ ಕಡಿಮೆ ಬೇಡಿಕೆ: ಕಳೆದ ಮೂರ್ನಾಲ್ಕು ವರ್ಷಗಳಿಂದ ಅಷ್ಟು ಬೇಡಿಕೆಯಲ್ಲಿಲ್ಲದ ಕಂಪ್ಯೂಟರ್ ಸೈನ್ಸ್ ವಿಭಾಗ ಮೆಕಾನಿಕಲ್ ಮತ್ತು ಸಿವಿಲ್ ವಿಭಾಗದಂತೆ ಮೂಲೆಗುಂಪಾಗುತ್ತಿತ್ತು. ಆದರೆ ಈ ವರ್ಷ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಂಪ್ಯೂಟರ್ ಸೈನ್ಸ್ ವಿಭಾಗ ಭರ್ತಿಯಾಗಿದೆ. ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಕ್ಕೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಕಾಮೆಡ್ ಕೆ ಅಧಿಕಾರಿಗಳು.

ಕಾಮೆಡ್ ಕೆ ಮಾತ್ರವಲ್ಲದೆ ಸರ್ಕಾರದ ಒಟ್ಟು 64 ಸಾವಿರ ಸೀಟುಗಳಲ್ಲಿ 21 ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com