ಶಿವಮೊಗ್ಗ: ಆಸ್ತಿಗಾಗಿ ಸೋದರದ ಜಗಳ ಕೊಲೆಯಲ್ಲಿ ಅಂತ್ಯ!

ಆಸ್ತಿಗಾಗಿ ಪ್ರಾರಂಭವಾಗಿದ್ದ ಜಗಳ ಸೋದರನ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ರೇವಣ್ಣ
ರೇವಣ್ಣ
Updated on: 
ಶಿವಮೊಗ್ಗ: ಆಸ್ತಿಗಾಗಿ ಪ್ರಾರಂಭವಾಗಿದ್ದ ಜಗಳ ಸೋದರನ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕು ಕೊಳಲೂರು ಗ್ರಾಮದಲ್ಲಿ ನಡೆದ ಘಟನೆಯಲ್ಲಿ ರೇವಣ್ಣ (45) ಕೊಲೆಯಾಗಿದ್ದಾನೆ.ರೇವಣ್ಣನನ್ನು ಆತನ ತಮ್ಮ ಪ್ರಕಾಶ್  ಹತ್ಯೆ ಮಾಡಿದ್ದಾನೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪ್ರಕಾಶ್ ನನ್ನು ಬಂಧಿಸಿರುಯ್ವ ಪೋಲೀಸರು ಘಟನೆಯ ತನಿಖೆ ಕೈಗೊಂಡಿದ್ದಾರೆ.
ರೇವಣ್ಣ ಹಾಗೂ ಪ್ರಕಾಶ್ ಸೋದರರಾಗಿದ್ದು  ಅಡಿಕೆ ತೋಟದ ಜಮೀನು ವಿಚಾರವಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಅಲ್ಲದೆ ಈ ಭೂವಿವಾದದ ಕುರಿತು ಇಬ್ಬರೂ ಕೋರ್ಟ್ ಕಟಕಟೆಗೆ ಏರಿದ್ದರು. ಆದರೆ ಇಬ್ಬರೂ ಈ ಸಂಬಂಧ ಜಗಳವಾಡುವುದು ಮಾತ್ರ ನಿಂತಿರಲಿಲ್ಲ.
ಬುಧವಾರ ಬೆಳಿಗ್ಗೆ ಸಹ ಜಮೀನಿನಲ್ಲಿ ಸೇರಿದ್ದ ಸೋದರರ ನಡುವೆ ಮತ್ತೆ ಮಾತಿನ ಚಕಮಕಿ ಪ್ರಾರಂಬವಾಗಿದೆ.ಈ ವೇಳೆ ಸಿಟ್ಟಿನಿಂದ ಪ್ರಕಾಶ್ ತನ್ನ ಕೈಲಿದ್ದ ಮಚ್ಚಿನಿಂದ ರೇವಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ರೇವಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ ಗ್ರಾಮಾಂತ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com