ಕಾವೇರಿ ತೀರ್ಪು: ರಜನಿಕಾಂತ್ ಹೇಳಿಕೆ ಖಂಡಿಸಿದ ಸಂಸದ ಪುಟ್ಟರಾಜು

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂಬ...
ಸಿಎಸ್ ಪುಟ್ಟರಾಜು
ಸಿಎಸ್ ಪುಟ್ಟರಾಜು
Updated on: 
ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂಬ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೇಳಿಕೆಯನ್ನು ಜೆಡಿಎಸ್ ಸಂಸದ ಸಿಎಸ್ ಪುಟ್ಟರಾಜು ಅವರು ಶನಿವಾರ ಖಂಡಿಸಿದ್ದಾರೆ.
ರಜನಿಕಾಂತ್ ಅವರು ಮೊದಲು ತಮಿಳುನಾಡಿನ ಪರ ಮಾತನಾಡುವುದನ್ನು ನಿಲ್ಲಿಸಲಿ ಮತ್ತು ತಾಯಿನಾಡು ಕರ್ನಾಟಕಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂದು ಪುಟ್ಟರಾಜು ತಿರುಗೇಟು ನೀಡಿದ್ದಾರೆ.
ರಜನಿಕಾಂತ್ ಅವರು ತಮಿಳುನಾಡು ಜನತೆಗೆ ಋಣಿಯಾಗಿದ್ದಾರೆ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ಅವರು ತಾವು ಹುಟ್ಟಿ, ಬೆಳೆದದ್ದು ಕರ್ನಾಟಕ ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ.
ಸುಪ್ರೀಂಕೋರ್ಟ್ ನೀಡಿರುವ ಕಾವೇರಿ ತೀರ್ಪಿನಿಂದ ಬೇಸರವಾಗಿದೆ. ಇದರಿಂದ ರೈತರ ಜೀವನಕ್ಕೆ ಸಮಸ್ಯೆಯಾಗಲಿದೆ. ಈ ಸಂಬಂಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಜನಿಕಾಂತ್ ಅವರು ನಿನ್ನೆ ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com