ಮೆಟ್ರೋದಲ್ಲಿ ಮಹಿಳಾ ಮೀಸಲು; ಬಿಎಂಆರ್'ಸಿಎಲ್ ಕ್ರಮಕ್ಕೆ ಮೊದಲ ದಿನವೇ ಮಹಿಳೆಯರ ಸಂತಸ

ನಮ್ಮ ಮೆಟ್ರೋ ರೈಲಿನ ಮೊದಲ ಬೋಗಿಯ 2 ಬಾಗಿಲುಗಳನ್ನು ಪೀಕ್ ಅವರ್'ನಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಬಿಎಂಆರ್'ಸಿಎಲ್ ಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವೇ ಮಹಿಳಾ ಪ್ರಯಾಣಿಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ...
ಮೆಟ್ರೋದಲ್ಲಿ ಮಹಿಳಾ ಮೀಸಲು; ಬಿಎಂಆರ್'ಸಿಎಲ್ ಕ್ರಮಕ್ಕೆ ಮೊದಲ ದಿನವೇ ಮಹಿಳೆಯರ ಸಂತಸ
ಮೆಟ್ರೋದಲ್ಲಿ ಮಹಿಳಾ ಮೀಸಲು; ಬಿಎಂಆರ್'ಸಿಎಲ್ ಕ್ರಮಕ್ಕೆ ಮೊದಲ ದಿನವೇ ಮಹಿಳೆಯರ ಸಂತಸ
Updated on
ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಮೊದಲ ಬೋಗಿಯ 2 ಬಾಗಿಲುಗಳನ್ನು ಪೀಕ್ ಅವರ್'ನಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಬಿಎಂಆರ್'ಸಿಎಲ್ ಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವೇ ಮಹಿಳಾ ಪ್ರಯಾಣಿಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. 

ಬಿಎಂಆರ್'ಸಿಎಲ್ ಕ್ರಮವನ್ನು ಸಾವಿರಾರು ಮಹಿಳಾ ಪ್ರಯಾಣಿಕರು ಸ್ವಾಗತಿಸಿದ್ದು, ಮೆಟ್ರೋದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೊಚ ನಿರಾಳ ದೊರಕಿತು ಎಂದು ಮಹಿಳೆಯರು ಹೇಳಿದ್ದಾರೆ. 

ಮೆಟ್ರೋ ರೈಲಿನ ಎಲ್ಲಾ ನಿಲ್ದಾಣಗಳಲ್ಲಿ ಮಹಿಳೆಯರಿಗೆ ರೈಲು ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ಮೊದಲ ಬೋಗಿಯ ಎರಡು ಬಾಗಿಲುಗಳನ್ನು ಮೀಸಲಿಡಲಾಗಿದ್ದು, ಈ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ನಿಲ್ದಾಣದ ಭದ್ರತಾ ಸಿಬ್ಬಂದಿ ಎಚ್ಚರವಹಿಸಲಿದ್ದಾರೆ. 

ರೈಲು ಹತ್ತಲು ಇನ್ನು ಮುಂದೆ ಯಾರೊಬ್ಬರೊಂದಿಗೂ ಜಗಳವಾಡುವ ಸಂದರ್ಭಗಳು ಎದುರಾಗುವುದಿಲ್ಲ ಎಂದು ಮಹಿಳಾ ಪ್ರಯಾಣಿಕರಾಗಿರುವ ಜಯಲಕ್ಷ್ಮಿಯವರು ಹೇಳಿದ್ದಾರೆ. 

ಇದು ಮೊದಲ ದಿನವಾಗಿದ್ದು, ಮಹಿಳಾ ಪ್ರಯಾಣಿಕರು ಸಂತಸದಿಂದ ಇದ್ದಾರೆ. ನಿರ್ಧಾರದಿಂದ ಯಾವುದಾದರೂ ಸಮಸ್ಯೆಗಳಿದ್ದರೆ ಅದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಒಂದು ವಾರ ಈ ಪ್ರಯೋಗಾರ್ಥ ಸೇವೆ ಮುಂದುವರೆಯಲಿದೆ. ಆ ನಂತರ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕೆಂದುನ್ನು ತೀರ್ಮೀಸಲಾಗುವುದು ಎಂದು ಬಿಎಂಆರ್'ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಅವರು ತಿಳಿಸಿದ್ದಾರೆ.
 
ಮಹಿಳೆಯರು ಯಾವುದೇ ಬಾಗಿನಿಂದ ಬೇಕಾದರೂ ರೈಲು ಹತ್ತಬಹುದು ಅಥವಾ ಇಳಿಯಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ತಮ್ಮ ಸ್ನೇಹಿತರು, ಕುಟುಂಬ ಸಮೇತರಾಗಿ ಬರುವವರು ಈ ಹಿಂದಿನಂತೆಯೇ ಮೆಟ್ರೋ ಸೇವೆ ಬಳಕೆ ಮಾಡಬಹುದು. ಆದರೆ, ಮೊದಲ ಬೋಗಿಯ ಎರಡು ಬಾಗಿಲುಗಳನ್ನು ಮಹಿಳೆಯರು ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. 

ಬಿಎಂಆರ್'ಸಿಎಲ್ ನಿರ್ಧಾರ ಉತ್ತಮವಾಗಿದೆ. ಆದರೆ, ಮಹಿಳೆಯರಿಗೆ ಬೋಗಿಯನ್ನು ಮೀಸಲಿಡಬೇಕು ಅಥವಾ ಮಹಿಳೆಯರಿಗೆ ಒಂದು ರೈಲನ್ನು ಮೀಸಲಿಡಬೇಕು. ಪ್ರತೀನಿತ್ಯ ಸಾಕಷ್ಟು ಮಹಿಳೆಯರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ, ಪೀಕ್ ಅವರ್'ನಲ್ಲಂತೂ ಮಹಿಳೆಯರು ಪ್ರಯಾಣ ಮಾಡುವುದು ಬಹಳ ಕಷ್ಟವಾಗಿರುತ್ತದೆ ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com