ಕಾಡುಗೋಡಿ ಬಳಿಯ ಬೆಳತೂರುವಿನ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ್ದ 14 ವರ್ಷದ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಪ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಬಂಧಿಸಿದ್ದಾರೆ.
ಬೆಂಗಳೂರು: ಕಾಡುಗೋಡಿ ಬಳಿಯ ಬೆಳತೂರುವಿನ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ್ದ 14 ವರ್ಷದ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಪ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಬಂಧಿಸಿದ್ದಾರೆ.
ಮೃತ ಬಾಲಕಿ ಮಾನಸ ಬಿಹಾರದ ಗೊಪಾಲ್ ಗಂಜ್ ಜಿಲ್ಲೆಯವಳ್ಳಾಗಿದ್ದು, ಬೆಂಗಳೂರಿಗೆ ಕರೆತಂದು ಶಿಶು ಪೋಷಣೆಯ ಕೆಲಸಕ್ಕೆ ನಿಯೋಜಿಸಲಾಗಿತ್ತು. ಜುಲೈ 12 ರಂದು ಬಂಧಿತ ಟೆಕ್ಕಿ ಕೃಷ್ಣಕಾಂತ್ ಸಿಂಗ್ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆತನ ಹೆಂಡತಿ, ಮಾನಸ ಹಾಗೂ ಆರು ತಿಂಗಳ ಮಗು ಮನೆಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10-30 ರ ಸಂದರ್ಭದಲ್ಲಿ ಸಿಂಗ್ ಹೆಂಡತಿ ಅಪಾರ್ಟ್ ಮೆಂಟ್ ನಿಂದ ಹೊರಗೆ ಬಂದಿದ್ದು, ಬಾತ್ ರೂಂ ಬಾಗಿಲು ಹಾಕಿದ್ದು, ಅದನ್ನು ಹೊಡೆಯುವಂತೆ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಬಿಜಯ್ ಕುಮಾರ್ ಮಹಾಕುಳ್ ಹೋಗಿ ಬಾಗಿಲು ಹೊಡೆದಾಗ ಬಾಲಕಿ ತನ್ನ ವೇಲ್ ನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಬಂದಿತ್ತು.
ನಂತರ ಚಾಕುವಿನಿಂದ ವೇಲ್ ಕತ್ತರಿಸಿ ಮಾನಸಳನ್ನು ಕೆಳಗೆ ಇಳಿಸಲಾಗಿತ್ತು .ನಂತರ ಮಹಾಕುಳ್ ಪೊಲೀಸರಿಗೆ ದೂರು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.