ಬೆಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ, ಒಲಾ ಕ್ಯಾಬ್ ಚಾಲಕನ ಬಂಧನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಒಲಾ ಕ್ಯಾಬ್ ಚಾಲಕನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಒಲಾ ಕ್ಯಾಬ್ ಚಾಲಕನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಜೂನ್ 1 ರಂದು  ಸಂತ್ರಸ್ತ ಮಹಿಳೆಯನ್ನು  ಮನೆಯಿಂದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ  ಕ್ಯಾಬ್  ಒಳಗಡೆಯೇ  ಲೈಂಗಿಕ ಕಿರುಕುಳಕ್ಕೆಆರೋಪಿ ಯತ್ನ ನಡೆಸಿರುವ ಸಂಗತಿ ತಿಳಿದುಬಂದಿದೆ.
ಕ್ಯಾಬ್  ಚಾಲಕ ವಿ. ಅರುಣ್ ಬಂಧಿತ ಆರೋಪಿಯಾಗಿದ್ದಾನೆ. ಆತನ ಕಾರು ((KA 53 C 6607) ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಂಬೈಗೆ ತೆರಳುವ ಉದ್ದೇಶದಿಂದ  ಸಂತ್ರಸ್ತೆ ಮಹಿಳೆ ಮನೆಯಿಂದ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೇಗ  ವಿಮಾನ ನಿಲ್ದಾಣದೊಳಗೆ ಕರೆದೊಯ್ಯುವುದಾಗಿ ಹೇಳಿ   ಮುಖ್ಯರಸ್ತೆಯಿಂದ ಪ್ರತ್ಯೇಕ  ಸ್ಥಳವೊಂದಕ್ಕೆ ಕರೆದುಕೊಂಡು  ಹೋಗಿ ಕಾರ್ ಬಾಗಿಲು ಹಾಕಿ ಆಕೆಯ ಮೇಲೆ  ಹಲ್ಲೆ ನಡೆಸಿದ್ದಾನೆ.
 ಸಂತ್ರಸ್ತೆ ಮಹಿಳೆ ಬಟ್ಟೆ ಬಿಚ್ಚುವಂತೆ ಹೇಳಿ, ಮೊಬೈಲ್ ಪೋನ್ ಕಸಿದುಕೊಂಡಿದ್ದಾನೆ.  ಬಳಿಕ ಏನನ್ನಾದರೂ ಮಾಡಿದ್ದರೆ,  ತನ್ನ ಸ್ನೇಹಿತರಿಕೆ ಕರೆದು ಸಾಮೂಹಿಕ ಅತ್ಯಾಚಾರ ನಡೆಸುವುದಾಗಿ ಬೆದರಿಕೆವೊಡ್ಡಿದ್ದಾನೆ. ನಂತರ ಆಕೆಯ ಪೋಟೋ ತೆಗೆದು ವಾಟ್ಸಾಪ್ ಗುಂಪಿನಲ್ಲಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com