ಬಾಲಕನಿಗೆ ಲೈಂಗಿಕ ಕಿರುಕುಳ: ಶಾಲಾ ಅಟೆಂಡರ್ ಬಂಧನ

ಶಾಲಾ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲಾ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಶಾಲಾ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲಾ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಶಾಲೆಯ 42 ವರ್ಷದ ಅಟೆಂಡರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ಆರೋಪಿ ಅಟೆಂಡರ್ ನನ್ನು ಶಾಲೆಯ ಸ್ವಚ್ಛತಾ ವಿಭಾಗದ ನೌಕರ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. 
ಸಂತ್ರಸ್ತ 1ನೇ ತರಗತಿ ಬಾಲಕ, ಬುಧವಾರ ಸಂಜೆ ಶಾಲೆಯ ಶೌಚಾಲಯಕ್ಕೆ ತೆರಳಿದ್ದ. ಈ ವೇಳೆ ಅಲ್ಲೇ ಇದ್ದ ಆರೋಪಿ ಶ್ರೀನಿವಾಸ್ ಬಾಲಕನನ್ನು ಹಿಂಬಾಲಿಸಿದ್ದು, ಮೂತ್ರ ವಿಸರ್ಜನೆ ಮಾಡುತ್ತಿದ್ದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.  ಘಟನೆಯಿಂದ ಆತಂಕಕ್ಕೆ ಒಳಗಾದ ಬಾಲಕ ಸಂಜೆ ಅಳುತ್ತಲೇ ಮನೆಗೆ ತೆರಳಿದ್ದಾನೆ. ಈ ವೇಳೆ ಪೋಷಕರಿಗೆ ವಿಷಯ ತಿಳಿಸಿದ್ದು, ಈ ಸಂಬಂಧ ಪೋಷಕರು ಶಾಲಾ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.
ಪೋಷಕರು ನೀಡಿದ ದೂರಿನ  ಮೇರೆಗೆ ಹೆಣ್ಣೂರು ಠಾಣಾ ಪೊಲೀಸರು ಆರೋಪಿ ಶ್ರೀನಿವಾಸ್ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ದೂರುದಾಖಲಿಸಿಕೊಂಡಿದ್ದು, ಶಾಲೆಯ ಸಿಸಿಟಿವಿ ದೃಶ್ಯಾವಶಳಿಗಳನ್ನು ವಶಕ್ಕೆ ಪಡೆದಿದ್ದಾರೆ.  ಅಂತೆಯೇ ಆರೋಪಿ ಶ್ರೀನಿವಾಸ್ ನ ಪೂರ್ವಾಪರ ವಿಚಾರಿಸುತ್ತಿದ್ದಾರೆ. 
ಶಾಲಾ ಆಡಳಿತ ಮಂಡಳಿ ತಿಳಿಸಿರುವಂತೆ ಆರೋಪಿ ಶ್ರೀನಿವಾಸ್ ಶಾಲೆಯ ಖಾಯಂ ಸಿಬ್ಬಂದಿ ಅಲ್ಲವಂತೆ. ಕಳೆದ 7 ವರ್ಷಗಳಿಂದೀಚಿಗೆ ಶ್ರೀನಿವಾಸ್ ಶಾಲೆಗೆ ಕೆಲಸಕ್ಕೆ ಸೇರಿದ್ದ. ಆದರೆ ಈ ಹಿಂದೆ ಎಂದೂ ಈತನ ವಿರುದ್ಧ ಇಂತಹ ದೂರುಗಳು ದಾಖಲಾಗಿರಲಿಲ್ಲ ಎಂದು ಶಾಲಾ ಮುಖ್ಯೋಪಧ್ಯಾಯರು ತಿಳಿಸಿದ್ದಾರೆ.
ಈ ಹಿಂದೆಯೂ ಸಾಕಷ್ಟು ಬಾರಿ ಶಾಲೆಗಳಲ್ಲಿ ಇಂತಹ ಕೃತ್ಯ ಬೆಳಕಿಗೆ ಬಂದಿತ್ತು. ಇತ್ತೀಚೆಗೆ ಅಂದರೆ 2017 ಫೆಬ್ರವರಿಯಲ್ಲಿ ಮಾರಥ್ ಹಳ್ಳಿಯಲ್ಲಿ 3 ವರ್ಷದ ನರ್ಸರಿ ವಿದ್ಯಾರ್ಥಿ ಮೇಲೆ  ಶಾಲಾ ಸೂಪರ್ ವೈಸರ್ ಲೈಂಗಿಕ ದೌರ್ಜನ್ಯವೆಸಗಿದ್ದ, ಘಟನೆ ಸಂಬಂಧ ಮಾರಥ್ ಹಳ್ಳಿ ಪೊಲೀಸರು ಆರೋಪಿ ಮತ್ತು ಶಾಲಾ ಪ್ರಾಂಶುಪಾಲರನ್ನು ಬಂಧಿಸಿದ್ದರು. ಅಂತೆಯೇ 2017ರ ಸೆಪ್ಟೆಂಬರ್ ನಲ್ಲಿ ಜಾಲಹಳ್ಳಿಯಲ್ಲೂ ಇಂತಹುದೇ ಘಟನೆ ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com