ಮೊದಲಿನಿಂದಲೂ ಶಂಕಿತ ಆರೋಪಿ ಮೇಲೆ ಕಣ್ಣಿಟ್ಟಿದ್ದ ಎಸ್ ಐಟಿ ಅಧಿಕಾರಿಗಳು ನವೀನ್ ನ ದೂರವಾಣಿ ಕರೆಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಈತ ಗನ್ ಮತ್ತು ಇತರೆ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳ ಕುರಿತು ಮಾತನಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಆರೋಪಿ ನವೀನ್ ಕುಮಾರ್ ಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದರು. ಅಲ್ಲದೆ ನವೀನ್ ಕುಮಾರ್ ಗೆ ಸನಾತನ ಸಂಸ್ಥೆ, ಹಿಂದೂ ಯುವ ಸೇನಾದಂತಹ ಕಠಿಣ ಹಿಂದೂಪರ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.